ಶನಿವಾರ, ಜೂನ್ 19, 2021
26 °C
67 ಜನರಿಗೆ ಕೋವಿಡ್ ದೃಢ * ಸೋಂಕಿತರ ಸಂಖ್ಯೆ 1,530ಕ್ಕೆ ಏರಿಕೆ

ಚಿತ್ರದುರ್ಗ: ಬಿಡುಗಡೆ ಆಗುವವರ ಸಂಖ್ಯೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಕೊರೊನಾ ಸೋಂಕು ತಗುಲಿ ಜಿಲ್ಲೆಯ ಹಲವೆಡೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ 120 ಜನ ಗುಣಮುಖರಾಗಿ ಭಾನುವಾರ ಬಿಡುಗಡೆ ಹೊಂದಿದ್ದಾರೆ. ಶನಿವಾರ 107 ಜನ ಬಿಡುಗಡೆ ಹೊಂದಿದ್ದರು. ಈ ಮೂಲಕ ಎರಡು ದಿನಗಳಲ್ಲಿ ಒಟ್ಟಾರೆ 227 ಜನ ಸೋಂಕಿನಿಂದ ಮುಕ್ತರಾಗಿದ್ದಾರೆ.

ಒಟ್ಟು 618 ಜನರ ಗಂಟಲು, ಮೂಗಿನ ದ್ರವದ ಮಾದರಿ ಸಂಗ್ರಹಿಸಲಾಗಿದೆ. 67 ಜನರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಇದರಿಂದಾಗಿ ಕೋವಿಡ್-19 ರೋಗಿಗಳ ಸಂಖ್ಯೆ 1,530ಕ್ಕೆ ಏರಿಕೆಯಾಗಿದೆ.  

ಒಬ್ಬರು ಮೃತಪಟ್ಟಿದ್ದು, ಈವರೆಗೆ 22 ಜನ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೇ 992 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 518 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಒಟ್ಟು 459 ಕಂಟೈನ್‌ಮೆಂಟ್ ವಲಯಗಳಿವೆ. ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 9,517 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.

ಈವರೆಗೆ 29,691 ಜನರ ಸ್ವ್ಯಾಬ್‌ ಸಂಗ್ರಹಿಸಲಾಗಿದ್ದು, 22,314 ಜನರ ವರದಿ ನೆಗೆಟಿವ್ ಬಂದಿದೆ. 5,544 ಜನರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು