ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಬಂದ್‌ಗೆ ಬೆಂಬಲ, ಸರ್ವಾನುಮತದ ತೀರ್ಮಾನ

ಬಂದ್‌ ರೂಪುರೇಷೆ ಕುರಿತು ಚರ್ಚಿಸಿದ ಸಂಘಟನೆಗಳ ಮುಖಂಡರು
Last Updated 26 ಸೆಪ್ಟೆಂಬರ್ 2020, 13:33 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ. 28ರಂದು ಆಯೋಜಿಸಿರುವ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಲು ಶನಿವಾರ ನಡೆದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸರ್ವಾನುಮತದಿಂದ ತೀರ್ಮಾನಿಸಿದರು.

ದೇಶದ ಜನತೆ ಕೊರೊನಾ ಸಂಕಷ್ಟದಲ್ಲಿ ನರಳುತ್ತಿರುವ ಸಂದರ್ಭದಲ್ಲಿ ಸರ್ಕಾರಗಳು ರೈತ, ಕಾರ್ಮಿಕ ಸಂಕುಲವನ್ನೇ ನಾಶ ಮಾಡುವ ಮೂರು ಸುಗ್ರೀವಾಜ್ಞೆ ಜಾರಿಗೆ ಮುಂದಾಗಿದೆ. ಇದನ್ನು ಖಂಡಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಂಘಟನೆಗಳು: ಐಕ್ಯತಾ ಹೋರಾಟ ಸಮಿತಿ, ಸ್ವರಾಜ್ ಇಂಡಿಯಾ ಪಕ್ಷ, ಎಐಟಿಯುಸಿ, ಎಸ್‌ಯುಸಿಐ ಕಮ್ಯುನಿಸ್ಟ್, ಜನಶಕ್ತಿ, ಸಿಐಟಿಯು, ಎಐಯುಟಿಯುಸಿ, ಅಂಬೇಡ್ಕರ್ ಸೇನೆ, ಗೂಡ್ಸ್‌ಸಟ್ ಲೋಕಲ್ ಎಪಿಎಂಸಿ ಲಾರಿ ಮಾಲೀಕರ ಸಂಘ, ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ, ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘ, ಜಿಲ್ಲಾ ಟೈಲರಿಂಗ್ ಅಸೊಸಿಯೇಷನ್, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ), ಯುವ ಮುನ್ನಡೆ, ಅಖಿಲ ಕರ್ನಾಟಕ ಹೊರಗುತ್ತಿಗೆ, ತುಂಡು ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘ, ಆಟೊ ಮಾಲೀಕರು ಮತ್ತು ಚಾಲಕರ ಸಂಘ, ಹಜ್ರತ್ ಟಿಪ್ಪು ಸುಲ್ತಾನ್ ಜುಮ್ರಾ ಮಲ್ಟಿ ಪರ್ಪಸ್ ವೆಲ್ಫೇರ್ ಡೆವಲೆಪ್‌ಮೆಂಟ್ ಟ್ರಸ್ಟ್ ಬೆಂಬಲ ಸೂಚಿಸಲಿವೆ.

ಸಂಘಟನೆಗಳ ಮುಖಂಡರಾದ ಜೆ.ಯಾದವರೆಡ್ಡಿ, ನೂಲೇನೂರು ಶಂಕರಪ್ಪ, ಬಸ್ತಿಹಳ್ಳಿ ಸುರೇಶ್‌ಬಾಬು, ಟಿ.ಷಫಿವುಲ್ಲಾ, ಡಿ.ಎನ್.ಮೈಲಾರಪ್ಪ, ಸಿ.ಕೆ.ಗೌಸ್‌ಪೀರ್, ರಮೇಶ್‌, ಎಚ್.ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT