ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಶುರಾಂಪುರ: ಅಭಿವೃದ್ಧಿಗೆ ಕೈಜೋಡಿಸಿದ ದಾನಿಗಳು, ಸಂಘ–ಸಂಸ್ಥೆಗಳು

Last Updated 9 ಅಕ್ಟೋಬರ್ 2021, 6:00 IST
ಅಕ್ಷರ ಗಾತ್ರ

ಪರಶುರಾಂಪುರ: ಸರ್ಕಾರಿ ಶಾಲೆ ಎಂದರೆ ಮೂಗು ಮರಿಯುವವರೇ ಹೆಚ್ಚು. ಖಾಸಗಿ ಶಾಲೆಯ ವಸ್ತ್ರ, ಶೂ, ಬಸ್ಸುಗಳಿಗೆ ಮನಸೋಲುವ ಪೋಷಕರೇ ಹೆಚ್ಚು. ಅದರೆ ಪಗಡಲಬಂಡೆ ಸರ್ಕಾರಿ ಶಾಲೆ ಇವೆಲ್ಲವನ್ನೂ ಮೀರಿ ವಿದ್ಯಾರ್ಥಿಗಳನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.

ಹೋಬಳಿ ವ್ಯಾಪ್ತಿಯ ಪಗಡಲಬಂಡೆ ಹಿರಿಯ ಪ್ರಾಥಮಿಕ ಶಾಲೆಯು ಕ್ಲಸ್ಟರ್ ಮಾದರಿ ಶಾಲೆಯಾಗಿದೆ. 1942ರಲ್ಲಿ ಆರಂಭವಾಗಿದ್ದು 80 ವಸಂತಗಳನ್ನು ಪೂರೈಸಿದೆ. ಹಲವು ವಿದ್ಯಾರ್ಥಿಗಳ ಜೀವನ ರೂಪಿಸಿದ್ದು, ಉತ್ತಮ ಪರಿಸರ, ವರ್ಣರಂಜಿತ ಶಾಲೆಯ ಕೊಠಡಿಗಳ ಗೋಡೆ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಒಂದು ಕೈ ಮುಂದು ಎನ್ನುವಂತಿದೆಈ ಶಾಲೆ.

ಇಲ್ಲಿ ಪ್ರತಿ ವಿಷಯವನ್ನೂ ಪರಿಣಾಮಕಾರಿಯಾಗಿ ಬೋಧನೆ ಮಾಡಲು ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕೊಠಡಿಗಳನ್ನು ರೂಪಿಸಲಾಗಿದೆ. ಅಯಾ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳನ್ನು ಗೋಡೆಗಳ ಮೇಲೆ ಬಿಡಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲಾಗಿದೆ.

ಅತ್ಯಾರ್ಕಷಕ ನಲಿ-ಕಲಿ ಕೊಠಡಿ: ಶಾಲೆಯಲ್ಲಿ 1ರಿಂದ 3ನೇ ತರಗತಿಯ ವಿದ್ಯಾರ್ಥಿಗಳನ್ನು ಸೆಳೆಯಲು ನಲಿ-ಕಲಿ ಕೊಠಡಿಯ ನಾಲ್ಕು ಗೋಡೆಗಳ ಮತ್ತು ಚಾವಣಿಯ ಮೇಲೆ ಚಿತ್ರಗಳನ್ನು ಬಿಡಿಸಲಾಗಿದೆ. ಚಿಕ್ಕಮಕ್ಕಳಿಗೆ ಚಿತ್ರಗಳನ್ನು ನೋಡಿ ಕಲಿಯುವ ವಾತಾವರಣ ಸೃಷ್ಟಿಸಲಾಗಿದೆ ಎನ್ನುತ್ತಾರೆ ಹಿರಿಯ ಶಿಕ್ಷಕ ಚಲುಮಪ್ಪ.

ದಾನಿಗಳಿಂದ ಅಗತ್ಯ ವಸ್ತುಗಳ ಕೊಡುಗೆ: ‘ಈ ಶಾಲೆಯಲ್ಲಿ ಕಲಿತಿರುವ ಹಳೆಯ ವಿದ್ಯಾರ್ಥಿಗಳು ಹಾಗೂ ಆಸಕ್ತಿ ಇರುವ ದಾನಿಗಳಿಂದ ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳು, ಅಜೀಂ ಪ್ರೇಮ್‌ಜಿ ಫೌಂಡೇಶನ್ ವತಿಯಿಂದ ಕಂಪ್ಯೂಟರ್‌ಗಳು, ಪೀಪಲ್ ಫಾರ್ ಪೀಪಲ್ಎನ್ನುವ ಸೇವಾ ಟ್ರಸ್ಟ್‌ ವತಿಯಿಂದ ಆಟಿಕೆಗಳು, ರಾಷ್ಟ್ರ ಲಾಂಛನವಾದ ನಾಲ್ಕು ತಲೆಯ ಸಿಂಹದಪ್ರತಿಮೆಯನ್ನು ಶಾಲೆಯ ಆವರಣದಲ್ಲಿ ನಿರ್ಮಿಸಲಾಗಿದೆ.ಹೀಗೆ ದಾನಿಗಳಿಂದ ಶಾಲೆಗೆಬೇಕಾದ ಅಗತ್ಯ ವಸ್ತುಗಳನ್ನುಪಡೆದು ಕೊಂಡಿದ್ದೇವೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಟಿ.

*

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ಚಟುವಟಿಕೆಯ ಜೊತೆ ಉತ್ತಮ ಪರಿಸರ ರೂಪಿಸುವಲ್ಲಿ ಶಿಕ್ಷಕರು ಶ್ರಮವಹಿಸುತ್ತಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯ.
-ಕೆ.ಎಸ್‌. ಸುರೇಶ, ಕ್ಷೇತ್ರ ಶಿಕ್ಷಣಾಧಿಕಾರಿ

*

ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಎಸ್‌ಡಿಎಂಸಿಯವರ ಬೆಂಬಲದಿಂದಾಗಿ ಉತ್ತಮ ಶಾಲೆಯಾಗಿ ರೂಪಗೊಳ್ಳಲು ಸಹಕಾರಿಯಾಗಿದೆ.
- ಮಲ್ಲಿರ್ಕಾಜುನ .ಟಿ, ಮುಖ್ಯಶಿಕ್ಷಕ, ಪಗಡಲಬಂಡೆ ಸ.ಹಿ.ಪ್ರಾ. ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT