ಹೊಸದುರ್ಗ: ‘ಮಾನವ ಧರ್ಮ ಎಂದರೆ ಪ್ರೀತಿ, ವಿಶ್ವಾಸ, ಸಂಸ್ಕಾರ ಕೊಡುವಂತಹದ್ದು. ಅಂತಹ ಧರ್ಮ ಕೊಟ್ಟಂತಹವರು ಬಸವಣ್ಣನವರು. ಅವರು ಕೊಟ್ಟ ಜೀವನದ ಸಂವಿಧಾನವನ್ನು ಪಾಲನೆ ಮಾಡುವವರೆಲ್ಲರೂ ಲಿಂಗಾಯತರು. ಪ್ರೀತಿ, ವಿಶ್ವಾಸ ಒಂದು ದೇಶದ ಕಾನೂನಾಗಬೇಕು. ವಿಚಾರಗಳು ಸ್ಪಷ್ಟವಾಗಿದ್ದರೆ ಅನುಷ್ಠಾನಗೊಳ್ಳುವುದರಲ್ಲಿ ಅನುಮಾನವಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ರಾಷ್ಟ್ರೀಯ ಬಸವ ಪ್ರತಿಷ್ಠಾನದ ವತಿಯಿಂದ ಗೋವಾದಲ್ಲಿನ ನೀಲಮ್ಸ್ ಗ್ರ್ಯಾಂಡ್ ಕ್ಯಾಲಂಗುಟೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಲಿಂಗಾಯತ ಸ್ವತಂತ್ರ ಧರ್ಮ ಅರಿವು ಸಂಘಟನೆ ಅನುಷ್ಠಾನ’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಧರ್ಮ ಜಾಗೃತಿಯ ಕಾರ್ಯಕ್ರಮಗಳಲ್ಲಿ ವಾದ ವಿವಾದಕ್ಕೆ ಅವಕಾಶವಿಲ್ಲ. ವಿಚಾರಗಳು ಚರ್ಚೆಯಾಗಿ ತೀರ್ಮಾನ ಆಗಬೇಕು. ಜನರನ್ನು ಜಾಗೃತಿ ಮೂಡಿಸಿ ಸಮಾಜದ ಕಡೆಗೆ ಕರೆದುಕೊಂಡು ಹೋಗಬೇಕು. ಸಾಮಾಜಿಕ ಪರಿವರ್ತನೆಯನ್ನು ಕೊಟ್ಟ ಬಸವಣ್ಣನವರ ಬಗ್ಗೆ ಮಾತನಾಡುವವರೆಲ್ಲಾ ಒಂದೇ ಸಮುದಾಯಕ್ಕೆ ಸೇರಿದವರಾಗಬೇಕು. ಬಸವಣ್ಣನವರು ಹಾಕಿಕೊಟ್ಟ ಸಂವಿಧಾನದ ಸಪ್ತಸೂತ್ರಗಳು ಪ್ರತಿಯೊಬ್ಬರಲ್ಲೂ ಮೂಡಿದರೆ ಇನ್ನಾವ ಸಂವಿಧಾನದ ಅವಶ್ಯಕತೆಯೂ ಬೇಕಾಗಿಲ್ಲ’ ಎಂದು ಹೇಳಿದರು.

‘ಸರ್ಕಾರ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಒಪ್ಪಲಿ ಅಥವಾ ಬಿಡಲಿ. ಬಸವಣ್ಣನವರ ಸಮಕಾಲೀನರು ಬಸವಣ್ಣನವರನ್ನು ಗುರು, ಲಿಂಗಾಯತ ಧರ್ಮದ ಸ್ಥಾಪಕ ಹಾಗೂ ಲಿಂಗಾಯತ ಸ್ವತಂತ್ರ ಧರ್ಮ ಎಂದು ಒಪ್ಪಿಕೊಂಡಿದ್ದರು. ಇಡೀ ದೇಶದಲ್ಲೇ ಲಿಂಗಾಯತ ಧರ್ಮದ ಬಗ್ಗೆ ಚಿಂತನ ಮಂಥನ ನಡೆಯುತ್ತಿದೆ. ರಾಷ್ಟ್ರೀಯ ಬಸವ ಪ್ರತಿಷ್ಠಾನದವರು ದೇಶ ವಿದೇಶಗಳಲ್ಲಿ ಶರಣರ ವೈಚಾರಿಕ ವಿಚಾರಗಳ ಬೀಜಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಬಸವ ತತ್ವ ನಮ್ಮೆಲ್ಲರ ಬದುಕಿಗೆ ಬೆಳಕಾಗಲಿ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

‘ಲಿಂಗಾಯತ ಧರ್ಮದೊಳಗೆ ಇರುವ ಕುತಂತ್ರಿಗಳಿಂದ ಲಿಂಗಾಯತ ಧರ್ಮ ಹಾಗೆಯೇ ತಟಸ್ಥವಾಗಿದೆ. ಬಸವಣ್ಣನವರಿಗೆ ಕಾಯಕ ಆಶ್ರಯವೇ ಮುಖ್ಯವಾಗಿತ್ತೇ ಹೊರತು ರಾಜನ ಆಶ್ರಯ ಮುಖ್ಯವಾಗಿರಲಿಲ್ಲ. ಲಿಂಗಾಯತ ಜಾತಿ ಸೂಚಕವಲ್ಲ, ಆಚಾರ, ವಿಚಾರ, ಸಿದ್ಧಾಂತದ ಸೂಚಕ. ಎಲ್ಲಾ ವಿರಕ್ತ ಮಠಾಧೀಶರು ಬಸವಣ್ಣನವರನ್ನು ಗುರುವಾಗಿ ಒಪ್ಪಿಕೊಂಡಿದ್ದರೆ ಲಿಂಗಾಯತ ಸ್ವತಂತ್ರ ಹೋರಾಟದ ಅವಶ್ಯಕತೆ ಇರುತ್ತಿರಲಿಲ್ಲ’ ಎಂದು ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗೋವಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧಣ್ಣ ಮೇಟಿ, ಸಿದ್ಧು ಯಾಪಲಪರವಿ, ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ.ಸುರೇಶ್, ಶಿವಸಂಚಾರದ ಕಲಾವಿದರಾದ ಎಚ್.ಎಸ್. ನಾಗರಾಜ್, ಮಾರಬಘಟ್ಟದ ರುದ್ರಾಚಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.