ಚಿತ್ರದುರ್ಗ: ‘ಫ.ಗು.ಹಳಕಟ್ಟಿಯವರ ಅವಿರತ ಶ್ರಮದ ಫಲವಾಗಿ ನಾವು ಶರಣರ ವಚನಗಳನ್ನು ಕಾಣುತ್ತಿದ್ದೇವೆ. ನಾವು ಅವರ ಜೀವನ ಸಾಧನೆಯ ಬಗ್ಗೆ ಅರಿತುಕೊಂಡು ಬದುಕು ಸಾರ್ಥಕಪಡಿಸಿಕೊಳ್ಳಬೇಕು’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.

ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ಬುಧವಾರ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ಜಯಂತ್ಯುತ್ಸವ ಹಾಗೂ ವಚನ ಸಂರಕ್ಷಣಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ತಾವು ನೋವುಂಡರೂ ಛಲ ಬಿಡದೆ ಚದುರಿ ಹೋಗಿದ್ದ ಸಾವಿರಾರು ವಚನಗಳನ್ನು ಹುಡುಕಿ ಹೆಕ್ಕಿ ಪ್ರಕಟಿಸಿದರು. ಅವರು ನೂರಾರು ವಚನಕಾರರ ಹತ್ತು ಸಾವಿರಕ್ಕೂ ಹೆಚ್ಚು ವಚನಗಳನ್ನು ಬೆಳಕಿಗೆ ತಂದಿದ್ದಾರೆ’ ಎಂದರು.

‘ಒಮ್ಮೆ ಬಿ.ಎಂ.ಶ್ರೀಕಂಠಯ್ಯ ವಿಜಯಪುರಕ್ಕೆ ಭೇಟಿ ನೀಡಿದಾಗ ಎಲ್ಲರೂ ಅವರನ್ನು ಪ್ರಸಿದ್ಧ ಗೋಳಗುಮ್ಮಟ ನೋಡಲು ಆಹ್ವಾನಿಸುತ್ತಾರೆ. ಆದರೆ, ಬಿ.ಎಂ.ಶ್ರೀ ಅವರು ತಾವು ವಚನ ಗುಮ್ಮಟವನ್ನು ಕಟ್ಟಿದ ಫ.ಗು.ಹಳಕಟ್ಟಿಯವರನ್ನು ಮೊದಲು ನೋಡುವುದಾಗಿ ಹೇಳಿ ಭೇಟಿ ಮಾಡಿ ಅವರ ಕಾರ್ಯ ಮೆಚ್ಚಿದ್ದರು. ಯಾವ ಸಂಘ–ಸಂಸ್ಥೆ, ಮಠ–ಮಾನ್ಯ, ಸಮಾಜಗಳು ಮಾಡದ ಮಹತ್ಕಾರ್ಯವನ್ನು ಹಳಕಟ್ಟಿಯವರು ಮಾಡಿದ್ದಾರೆ’ ಎಂದು ತಿಳಿಸಿದರು.

ಲೇಖಕ ಗಣೇಶ ಅಮೀನಗಡ ಮಾತನಾಡಿ, ‘ಫ.ಗು.ಹಳಕಟ್ಟಿಯವರು ತಮ್ಮ ಸರ್ವಸ್ವವನ್ನು ವಚನಗಳ ಉಳಿವಿಗಾಗಿ ಮುಡಿಪಿಟ್ಟಿದ್ದರು. ಅವರ ತಂದೆಯಿಂದ ಸಾಹಿತ್ಯದ ಕಡೆ ಪ್ರೇರಣೆ ಪಡೆದರು. ಅವರಿಗೆ ಸೈಕಲ್ ಸಂಗಾತಿಯಾಗಿತ್ತು. ಅವರದ್ದು ಸರಳ ಜೀವನ. ಬಾಡಿಗೆ ಮನೆಯಲ್ಲಿ ತಮ್ಮ ಜೀವನ ಸವೆಸಿದರು. ವಚನ ಸಾಹಿತ್ಯ ಸಂರಕ್ಷಣೆಯ ಜೊತೆಗೆ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದರು’ ಎಂದರು.

‘ವಿಜಯಪುರದಲ್ಲಿ ಬಿಎಲ್ಡಿಎ ಶಿಕ್ಷಣ ಸಂಸ್ಥೆ, ಜನತಾ ಶಿಕ್ಷಣ ಸಂಘ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದರು. ಸಿದ್ದೇಶ್ವರ ಸಹಕಾರ ಸಂಘ ಸ್ಥಾಪಿಸಿ ಸಹಕಾರ ಕ್ಷೇತ್ರದ ಕಡೆಗೂ ಗಮನ ಹರಿಸಿದರು. ಶಿಕ್ಷಣ ವಂಚಿತ ಜಿಲ್ಲೆಯನ್ನು ಅಕ್ಷರವಂತರ ಜಿಲ್ಲೆಯನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.

‘ಅವರು ಶಿಕ್ಷಣ ಸಮಿತಿಯಲ್ಲಿದ್ದ ಕಾಲಾವಧಿಯಲ್ಲಿ ಹೆಚ್ಚು ಕನ್ನಡ ಶಾಲೆಗಳನ್ನು ತೆರೆದು ಕನ್ನಡದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದರು. ವಿದ್ಯಾರ್ಥಿಗಳು ವಚನಗಳನ್ನು ಓದಲಿ ಎಂಬುದು ಅವರ ಆಶಯವಾಗಿತ್ತು. ಕೃಷಿಕರಿಗೆ ಒಡ್ಡು ಕಟ್ಟಲು ಸಲಹೆ ನೀಡಿ ಮಳೆ ನೀರು ನಿಲುಗಡೆಯ ಮಹತ್ವ ತಿಳಿಸಿದ್ದರು’ ಎಂದು ಸ್ಮರಿಸಿದರು.

‘ಶ್ರೀಮಂತಿಕೆಯ ಜೀವನದ ಕಡೆ ಒಲವು ತೋರದೆ ವಚನಗಳ ಉಳಿವಿಗಾಗಿ ತಮ್ಮ ಬದುಕನ್ನು ಸರ್ಮಪಿಸಿದರು. ಒಮ್ಮೆ ರೈಲಿನಿಂದ ಬಿದ್ದು ತಮ್ಮ ಕಾಲು ಮುರಿದುಕೊಂಡರೂ ಲೆಕ್ಕಿಸದೆ ಕೆಲಸ ಮುಂದುವರಿಸಿದರು. ಶಿವಾನುಭವ ಎಂಬ ಪತ್ರಿಕೆಯನ್ನು ಅಂದಾಜು 30 ವರ್ಷಗಳ ಕಾಲ ನಡೆಸಿ ವಚನಗಳನ್ನು ಪ್ರಕಟಿಸಿದರು’ ಎಂದು ತಿಳಿಸಿದರು.

‘ಸರಳ ಜೀವನ ನಡೆಸಲು, ಯುವಜನ ದುಶ್ಚಟ ಮುಕ್ತರಾಗಲು ಪ್ರೇರಣೆ ನೀಡಿದರು. ಜಾತಿ–ಭೇದ ನಿಮೂರ್ಲನೆ, ಸ್ತ್ರೀ ಸಮಾನತೆ, ಮೌಢ್ಯಗಳ ನಿವಾರಣೆ ಕುರಿತ ಶರಣರ ವಚನಗಳನ್ನು ಪ್ರಕಟಿಸಿ ವಚನಗಳ ಮಹತ್ವವನ್ನು ಸಮಾಜಕ್ಕೆ ಸಾರಿದರು’ ಎಂದು ಹೇಳಿದರು.

ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ಅಖಿಲ ಭಾರತೀಯ ವೀರಶೈವ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ, ಮುಖಂಡರಾದ ಕೆ.ಎಂ.ವೀರೇಶ್, ಜಯದೇವ ಮೂರ್ತಿ, ನಾಗರಾಜ ಸಂಗಂ, ಷಡಾಕ್ಷರಯ್ಯ ಇದ್ದರು.

Quote - ತಮ್ಮ ಜೀವನವನ್ನೇ ವಚನಗಳಿಗಾಗಿ ಮುಡಿಪಾಗಿಟ್ಟ ಹಳಕಟ್ಟಿಯವರ ಸ್ಮರಣೆ ಅತ್ಯಾವಶ್ಯ. ಬಸವ ಜಯಂತಿಗೆ ನೀಡುವಷ್ಟೇ ಪ್ರಾಶಸ್ತ್ಯ ನೀಡಬೇಕು. ಇಡೀ ರಾಜ್ಯದಲ್ಲಿ ಆಚರಣೆ ಮಾಡುವಂತಾಗಬೇಕು ಬಸವಕುಮಾರ ಸ್ವಾಮೀಜಿ ಎಸ್ಜೆಎಂ ಆಡಳಿತ ಮಂಡಳಿ ಸದಸ್ಯ

Cut-off box - 5ರಂದು ಪೂರ್ವಬಾವಿ ಸಭೆ ಲಿಂಗೈಕ್ಯ ಮಲ್ಲಿಕಾರ್ಜುನ ಸ್ವಾಮೀಜಿಯ 32ನೇ ಸ್ಮರಣೋತ್ಸವವನ್ನು ಆ. 8ರಂದು ಹೊಳಲ್ಕೆರೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಈ ವಿಚಾರವಾಗಿ ಜುಲೈ 5ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು. ‘ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ. ಆದರೆ ಅವರನ್ನು ಭಾರತದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಜೂನ್ 30ರಂದು ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದರು. ‘ಸೆ. 1ರಿಂದ ಅ. 1ರವರೆಗೆ ರಾಜ್ಯದಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಯಲಿದೆ. ಸೆ. 16ರಂದು ಈ ಅಭಿಯಾನ ಚಿತ್ರದುರ್ಗಕ್ಕೆ ಬರಲಿದೆ. ಎಲ್ಲ ಸಮಾಜಗಳ ಮುಖಂಡರು ಅಭಿಯಾನಕ್ಕೆ ಸಹಕಾರ ನೀಡಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.