ವಾಣಿವಿಲಾಸಪುರ (ಹಿರಿಯೂರು): ‘ವಾಣಿವಿಲಾಸ ಜಲಾಶಯಕ್ಕೆ ಕಣ್ಣಿಗೆ ಕಾಣುವಷ್ಟು ದೂರದಲ್ಲಿರುವ ಭರಮಗಿರಿ ಕೆರೆಗೆ ಭದ್ರಾ ಮೇಲ್ದಂಡೆ ಅಥವಾ ಬೇರೆ ಯಾವುದಾದರೂ ಮೂಲದಿಂದ ನೀರು ತುಂಬಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟವೊಂದೇ ಮಾರ್ಗ’ ಎಂದು ರೈತ ಮುಖಂಡರು ತಿಳಿಸಿದರು.

ತಾಲ್ಲೂಕಿನ ವಾಣಿವಿಲಾಸಪುರ
ದಲ್ಲಿರುವ ಮೀನುಗಾರಿಕೆ ಇಲಾಖೆ ಕಚೇರಿಯ ಆವರಣದಲ್ಲಿ ಸೋಮವಾರ ನಡೆದ ಕೆರೆ ಅಚ್ಚುಕಟ್ಟು ಪ್ರದೇಶದ ಗ್ರಾಮಗಳ ರೈತ ಮುಖಂಡರ ಸಭೆಯಲ್ಲಿ ಇಂತಹ ತೀರ್ಮಾನ ಕೈಗೊಳ್ಳಲಾಯಿತು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎ.ಉಮೇಶ್, ‘ನೀರಿನ ಕೊರತೆಯಿಂದ ತೋಟಗಳು ಒಣಗಿವೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಭರಮಗಿರಿ ಕೆರೆಗೆ ನೀರು ಬರುವುದಿಲ್ಲ ಎಂಬ ಮಾತಿನಿಂದ ರೈತರು ಆತಂಕಗೊಂಡಿದ್ದಾರೆ. ವಾಣಿವಿಲಾಸ ಜಲಾಶಯದಿಂದ ಪೈಪ್‌ಲೈನ್ ಮೂಲಕ ನೇರವಾಗಿ ನೀರು ಹರಿಸುವ ಯೋಜನೆ ರೂಪಿಸಿ ಕಾರ್ಯಗತಗೊಳಿಸುವಂತೆ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹಾಗೂ ಸಂಸದ ನಾರಾಯಣಸ್ವಾಮಿಯವರಿಗೆ ಮನವಿ ಸಲ್ಲಿಸೋಣ’ ಎಂದು ಅವರು ಸಲಹೆ ನೀಡಿದರು. ಶ್ರೀಪತಿ ಫಾರಂ ಮಾಲೀಕ ಗೌತಮ್, ಜಯರಾಮಪ್ಪ, ಲೋಕೇಶ್, ಕಾಂತರಾಜ್, ಕಣುಮಪ್ಪ, ಬಿ.ರಾಮಪ್ಪ, ನಾಗೇಂದ್ರಪ್ಪ, ಜಯಣ್ಣ, ಪ್ರಭಾಕರ್, ನಾಗರಾಜ್, ಎಸ್.ಎಸ್.ರಂಗಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.