ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡು ಪ್ರದೇಶದ ರೈತರಿಗೆ ಸರ್ಕಾರ ಸ್ಪಂದಿಸಲಿ: ಸುಮಂಗಲಮ್ಮ

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಸುಮಂಗಲಮ್ಮ ಒತ್ತಾಯ
Last Updated 2 ನವೆಂಬರ್ 2020, 2:36 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ಬಯಲುಸೀಮೆ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ಸ್ಪಂದಿಸುವ ಮೂಲಕ ನೆರವಿಗೆ ಬರಬೇಕು. ಪ್ರಶಸ್ತಿಗಳ ಮೂಲಕ ರೈತರಿಗೆ ಸೂಕ್ತ ನ್ಯಾಯ ಒದಗಿಸಲು ಸಾಧ್ಯವಿಲ್ಲ’ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಕೃಷಿಕ ಮಹಿಳೆ ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ ಹೇಳಿದರು.

ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.

ಸರ್ಕಾರದ ಹಲವು ನೀತಿಗಳಿಂದ ಕೃಷಿ ಕ್ಷೇತ್ರ ಸಂಕಷ್ಟಲ್ಲಿದೆ. ಬೆಳೆ ಬೆಳೆಯುವ ಕಾರ್ಯಕ್ಕೆ, ಮಾರಾಟ ವ್ಯವಸ್ಥೆಗೆ ನೆರವು ನೀಡಬೇಕು. ಎಲ್ಲ ಹಂತದಲ್ಲೂ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಅಧ್ಯಯನದ ಮೂಲಕ ಕ್ಷೇತ್ರವನ್ನು ಸುಧಾರಣೆ ಮಾಡಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಮಲ್ಲಿಕಾರ್ಜುನ್ ಧ್ವಜಾರೋಹಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಒ.ಮೊರಾರ್ಜಿ ಮಾತನಾಡಿದರು.

ಸಿಪಿಐ ಉಮೇಶ್ ನಾಯಕ, ಬಿಇಒ ಶಿವರಾಜ ನಾಯಕ, ಬಿಆರ್‌ಸಿ ಹನುಮಂತಪ್ಪ, ಸಿಪಿಐನ ಜಾಫರ್ ಷರೀಫ್, ಕರ್ನಾಟಕ ರಕ್ಷಣಾ ವೇದಿಕೆಯ ಸೂರಮ್ಮನಹಳ್ಳಿ ನಾಗರಾಜ್, ಟಿಎಚ್‌ಒ ಡಾ.ಸುಧಾ, ತುಮಕೂರ್ಲಹಳ್ಳಿ ಓಬಣ್ಣ, ಮಹೇಶ್, ಎಂ.ಡಿ.ಲತೀಫ್ ಸಾಬ್, ಜಾಖೀರ್ ಹುಸೇನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT