ಆಲಿಕಲ್ಲು ಮಳೆ: ಬಾಳೆ ತೋಟಕ್ಕೆ ಹಾನಿ

ಹಿರಿಯೂರು: ನಗರದ 7 ಕಿ.ಮೀ. ವ್ಯಾಪ್ತಿಯಲ್ಲಿ ಭಾನುವಾರ ಆಲಿಕಲ್ಲು ಮಳೆಯಾಗಿದೆ.
ತಾಲ್ಲೂಕಿನ ಕಸ್ತೂರಿ ರಂಗಪ್ಪನಹಳ್ಳಿಯಲ್ಲಿ ರಾಜಪ್ಪ ಎಂಬುವವರ ಮೂರು ಎಕರೆಯ ಬಾಳೆ ತೋಟಕ್ಕೆ ಹಾನಿಯಾಗಿದ್ದು, ಶೇ 70ರಷ್ಟು ಕಂದುಗಳು ಗಾಳಿಯ ಹೊಡೆತಕ್ಕೆ ನೆಲಕ್ಕೆ ಬಿದ್ದಿವೆ. ಭೀಮನಬಂಡೆ ಸಮೀಪದ ಶಿವಮೂರ್ತಿ ಎಂಬುವವರ ಮಾವಿನ ತೋಟದಲ್ಲಿಸಾವಿರಾರು ಮಾವಿನ ಕಾಯಿಗಳು ನೆಲಕ್ಕೆ ಬಿದ್ದಿವೆ.
ಆಲಿಕಲ್ಲು ಮಳೆಗೆ ಬಾಳೆ, ದಾಳಿಂಬೆ, ಪಪ್ಪಾಯಿ ಅಥವಾ ಮಾವು ಹಾಳಾಗಿದೆ. ಆಲಿಕಲ್ಲು ಬಿದ್ದ ಹಣ್ಣುಗಳನ್ನು ಯಾವ ವರ್ತಕರೂ ಖರೀದಿಸುವುದಿಲ್ಲ ಎಂದು ರೈತ ಶಿವಮೂರ್ತಿ ಅಳಲು ತೋಡಿಕೊಂಡರು.
‘ಈಗ ತಾನೆ ಬಾಳೆ ಗೊನೆ ಹೊಡೆಯಲು ಆರಂಭವಾಗಿತ್ತು. ಸಾವಯವ ಗೊಬ್ಬರ ಹಾಕಿದ್ದರಿಂದ ನಮ್ಮ ನಿರೀಕ್ಷೆಗೂ ಮೀರಿ ಬಾಳೆ ಬೆಳೆದಿತ್ತು. ಒಂದು ಗೊನೆ ಸರಾಸರಿ 30–35 ಕೆಜಿ ತೂಕ ಬರುವ ನಿರೀಕ್ಷೆ ಇತ್ತು. ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಗೆ ಒಳ್ಳೆಯ ದರವಿತ್ತು. ಬಿರುಗಾಳಿ, ಮಳೆಗೆ ಎಲ್ಲ ಹಾನಿಯಾಗಿದೆ’ ಎಂದು ರಾಜಪ್ಪ ಅಳಲು ತೋಡಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.