ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ: ಕೆರೆ, ಕಟ್ಟೆ, ಚೆಕ್‌ಡ್ಯಾಂಗೆ ಜೀವಕಳೆ

Last Updated 20 ಮೇ 2022, 4:57 IST
ಅಕ್ಷರ ಗಾತ್ರ

ನಾಯಕನಹಟ್ಟಿ: ನಿರಂತರ ಬರಗಾಲದಿಂದ ತತ್ತರಿಸಿ ಹೋಗಿದ್ದ ನಾಯಕನಹಟ್ಟಿ ಹೋಬಳಿಗೆ ನಾಲ್ಕುದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಕೆರೆ, ಹಳ್ಳ-ಕೊಳ್ಳಗಳಲ್ಲಿ ನೀರು ಸಂಗ್ರಹವಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಹೋಬಳಿಯಲ್ಲಿ 48 ಹಳ್ಳಿಗಳ ರೈತರು ಮಳೆಯಾಶ್ರಿತ ಬೇಸಾಯ ಪದ್ಧತಿಯನ್ನು ಅನುಸರಿಸುತ್ತಾರೆ. ಆದರೆ ಕಳೆದ ಕೆಲ ವರ್ಷಗಳಿಂದ ಸಕಾಲಕ್ಕೆ ಮಳೆಯಾಗದೆ ಕೃಷಿ ಚಟುವಟಿಕೆಗೆ ಹಿನ್ನಡೆಯುಂಟಾಗಿತ್ತು. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ಸುಮಾರು 7 ಕೆರೆಗಳು ಸೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 20ಕ್ಕೂ ಹೆಚ್ಚು ಕೆರೆಗಳು ನೀರಿಲ್ಲದೆ ಒಣಗಿ ಹೋಗಿದ್ದವು. ಇದರಿಂದ ನೀರಾವರಿ ಕೃಷಿ ಪದ್ಧತಿಯು ನೆಲಕಚ್ಚಿತ್ತು.

ಆದರೆ ನಾಲ್ಕು ದಿನಗಳಿಂದ ನಿರಂತರವಾಗಿ ಹೋಬಳಿಯ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಹಳ್ಳ, ಕೊಳ್ಳಗಳು, ಚೆಕ್‌ಡ್ಯಾಂಗಳು, ತಗ್ಗುಗುಂಡಿಗಳು ಭರ್ತಿಯಾಗುತ್ತಿವೆ. ನಾಯಕನಹಟ್ಟಿ ಪಟ್ಟಣದ ಜೀವನಾಡಿಯಾಗಿರುವ ತಿಪ್ಪೇರುದ್ರಸ್ವಾಮಿ ದೊಡ್ಡಕೆರೆಗೆ ನೀರು ಬರುತ್ತಿದೆ. ಜನರು ತಂಡೋಪತಂಡವಾಗಿ ಬಂದು ಹರಿಯುತ್ತಿದ್ದ ನೀರನ್ನು ಕಂಡು ಸಂಭ್ರಮಿಸಿದರು.

ಯುವಕರು ಕೆರೆ ಮತ್ತು ಹಳ್ಳದ ದಂಡೆಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ಕಂಡುಬಂತು. ಎನ್. ಉಪ್ಪಾರಹಟ್ಟಿ ಗ್ರಾಮದ ಬಳಿ ಗುರುತಿಪ್ಪೇರುದ್ರಸ್ವಾಮಿ ದೊಡ್ಡಕೆರೆಗೆ ಹಾದು ಹೋಗುವ ಹಳ್ಳದಲ್ಲಿ ಯುವಕರು ಮೀನುಗಳನ್ನು ಹಿಡಿಯಲು ಬಲೆ, ಸೊಳ್ಳೆ ಪರದೆಗಳನ್ನು ಹಿಡಿದು ನಿಂತಿದ್ದರು.

ನೇಲಗೇತನಹಟ್ಟಿ ಕಾಲುವೆ, ಉಪ್ಪಾರಹಟ್ಟಿ, ಗೊಲ್ಲಹಳ್ಳಿ, ಎತ್ತಿನಹಟ್ಟಿ, ಗುಂತಕೋಲಮ್ಮನಹಳ್ಳಿ, ರೇಖಲಗೆರೆ, ಮನುಮೈನಹಟ್ಟಿ ಕೆರೆಗಳಿಗೆ ನೀರು ಹರಿದುಬರುತ್ತಿದೆ. ಇದರಿಂದ ರೈತರಲ್ಲಿ ಅಂತರ್ಜಲಮಟ್ಟ ಹೆಚ್ಚುವ ಆಸೆ ಹೋಬಳಿಯಲ್ಲಿ ಚಿಗುರೊಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT