ಹಿರಿಯೂರು ನಗರದ ಜನಸಂಖ್ಯೆ 70 ಸಾವಿರ ದಾಟಿದ್ದರೂ ಹೇಳಿಕೊಳ್ಳುವಂತಹ ಒಂದೇ ಒಂದು ಉದ್ಯಾನವಿಲ್ಲ. ನಿರುಪಯುಕ್ತವಾಗಿರುವ ಲಕ್ಕವ್ವನಹಳ್ಳಿ ಒಡ್ಡನ್ನು ಪ್ರವಾಸಿ ತಾಣವನ್ನಾಗಿಸಿದರೆ ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಲು ಅನುಕೂಲವಾಗುತ್ತದೆ
ಸಿ.ಆರ್.ಸ್ಮಿತಾ ರಾಘವೇಂದ್ರ ಹಿರಿಯೂರು
ನಗರಸಭೆಯಲ್ಲಿ ಕೆರೆ ಅಭಿವೃದ್ಧಿ ಯೋಜನೆಯಡಿ ಸಾಕಷ್ಟು ಅನುದಾನ ಲಭ್ಯವಿದ್ದು ನಗರಸಭೆ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಲಕ್ಕವ್ವನಹಳ್ಳಿ ಒಡ್ಡನ್ನು ಪ್ರವಾಸಿ ತಾಣವನ್ನಾಗಿಸಲು ಗಂಭೀರ ಪ್ರಯತ್ನ ಮಾಡುತ್ತೇವೆ