ಹಿರಿಯೂರು: ತಾಲ್ಲೂಕಿನಲ್ಲಿ ಈಗಾಗಲೇ 12 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳು ನಡೆಯುತ್ತಿದ್ದು, ಈ ವರ್ಷದಿಂದ ಮತ್ತೆ ಹೆಚ್ಚುವರಿಯಾಗಿ 10 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಿಸಲು ಇಲಾಖೆ ಅನುಮತಿ ನೀಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ತಿಳಿಸಿದರು.

ನಗರದಲ್ಲಿ ಬುಧವಾರ ಇಂಗ್ಲಿಷ್ ಮಾಧ್ಯಮ ಮಂಜೂರಾಗಿರುವ 10 ಶಾಲೆಗಳ ಮುಖ್ಯ ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜವನಗೊಂಡನಹಳ್ಳಿ, ಸೂರಪ್ಪನಹಟ್ಟಿ, ಬಡ ಗೊಲ್ಲರಹಟ್ಟಿ, ವೇಣುಕಲ್ಲುಗುಡ್ಡ, ಕೋಡಿಹಳ್ಳಿ, ಭರಂಪುರ, ಹಿರಿಯೂರು ಪಟ್ಟಣದ ಗೋಪಾಲಪುರ ಬಡಾವಣೆಯ ಶಾಲೆ, ಸೊಂಡೆಕೆರೆ ಮತ್ತು ಹೂವಿನ ಹೊಳೆ ಗ್ರಾಮಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ದೊರೆತಿದೆ. ತಕ್ಷಣದಿಂದ ಒಂದನೇ ತರಗತಿಯಲ್ಲಿ ಮಾತ್ರ ಈ ವರ್ಷಕ್ಕೆ ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಿಸಬೇಕು. ಈ ಸಂಬಂಧ ಇಲಾಖೆ ಸೂಚನೆಯಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಇಂಗ್ಲಿಷ್ ಮಾಧ್ಯಮ ಆರಂಭವಾಗಿರುವ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು ಎಂದು ತಿಪ್ಪೇಸ್ವಾಮಿ ಸಲಹೆ ನೀಡಿದರು.

ಹಿಂದಿನ ವರ್ಷ ಮರಡಿಹಳ್ಳಿ, ಹೊಸ ಯಳನಾಡು, ಯರಬಳ್ಳಿ, ಹಿರಿಯೂರು ನಗರದ ಬಸ್ ನಿಲ್ದಾಣ ಶಾಲೆ, ನೆಹರು ಮೈದಾನ ಮತ್ತು ಆಜಾದ್ ನಗರ, ಹರಿಯಬ್ಬೆ, ಆದಿವಾಲ, ಮಸ್ಕಲ್, ಮ್ಯಾಕ್ಲೂರಹಳ್ಳಿ, ಧರ್ಮಪುರ, ರಂಗೇನಹಳ್ಳಿಗಳಿಗೆ ಇಂಗ್ಲಿಷ್ ಮಾಧ್ಯಮ ಮಂಜೂರಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.