ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನ ಧರ್ಮಪುರಿ ಸಮೀಪ ರೈಲಿನಿಂದ ಬಿದ್ದು ಹೊಳಲ್ಕೆರೆ ಮಹಿಳೆ ಸಾವು

Published 26 ಮೇ 2024, 11:24 IST
Last Updated 26 ಮೇ 2024, 11:24 IST
ಅಕ್ಷರ ಗಾತ್ರ

ಹೊಳಲ್ಕೆರೆ: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಪಟ್ಟಣದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಧರ್ಮಪುರಿ ಸಮೀಪದ ಟೋನೂರು ಸಮೀಪ ನಡೆದಿದೆ.

ಪಟ್ಟಣದ ಮುಷ್ಟುಗರ ಹಟ್ಟಿಯ ನಿರ್ಮಲಮ್ಮ (50) ಮೃತ ಮಹಿಳೆ.

ನಿರ್ಮಲಮ್ಮ ಹಾಗೂ ಅವರ ಪತಿ ಕುಮಾರ್ ಆಚಾರ್ ಸೇರಿದಂತೆ ಕುಟುಂಬದ ಸದಸ್ಯರು ತಮಿಳುನಾಡಿನ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೋಗಿದ್ದರು. ಇವರೊಂದಿಗೆ ಪ್ರವಾಸದ ಚೀಟಿ ಮಾಡಿದ್ದ 50 ಜನ ಕೂಡ ತೆರಳಿದ್ದರು. ಪ್ರವಾಸ ಮುಗಿಸಿ ಮಧುರೈನಿಂದ ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ.

ಪತಿ ಮುಂದಿನ ನಿಲ್ದಾಣದಲ್ಲಿ ಎಚ್ಚರಗೊಂಡಾಗ ಪಕ್ಕದಲ್ಲಿ ಪತ್ನಿ ಇಲ್ಲದ್ದನ್ನು ಕಂಡು ಗಾಬರಿಗೊಂಡಿದ್ದಾರೆ. ತಕ್ಷಣವೇ ಶೌಚಾಲಯ ಬಳಿ ಹೋಗಿ ನೋಡಿದಾಗ ನಿರ್ಮಲಮ್ಮ ಅವರ ಚಪ್ಪಲಿ ಹಾಗೂ ಮೊಬೈಲ್ ಕಾಣಿಸಿವೆ. ನಂತರ ಧರ್ಮಪುರಿ ಪೋಲಿಸರಿಗೆ ದೂರು ನೀಡಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದಾಗ ರೈಲ್ವೆ ಹಳಿ ಸಮೀಪ ನಿರ್ಮಲಮ್ಮ ಅವರ ಶವ ಸಿಕ್ಕಿದೆ. ಮೂತ್ರ ವಿಸರ್ಜನೆಗೆ ಹೋದಾಗ ನಿರ್ಮಲಮ್ಮ ಆಯ ತಪ್ಪಿ ರೈಲಿನಿಂದ ಹೊರಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT