ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆ: ಕಾನೂನು ಸಡಿಲಗೊಳಿಸಲು ಮನವಿ

ಮುಖ್ಯಮಂತ್ರಿಯಿಂದ ಸಕಾರಾತ್ಮಕ ಸ್ಪಂದನೆ
Published 16 ಜನವರಿ 2024, 22:17 IST
Last Updated 16 ಜನವರಿ 2024, 22:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಭೋವಿ ಜನಾಂಗದ ಕುಲ ಕಸುಬಾಗಿರುವ ಕಲ್ಲು ಗಣಿಗಾರಿಕೆಯನ್ನು ಮುಂದುವರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕಾನೂನು ಸಡಿಲಗೊಳಿಸುವಂತೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಸ್ವಾಮೀಜಿ ಕೋರಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಕುರಿತು ಪರಿಶೀಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೂಚಿಸಿದ್ದಾರೆ.

‘ಗಣಿಗಳಲ್ಲಿ ದೊಡ್ಡ ಯಂತ್ರಗಳನ್ನು ಬಳಸುವ ಮೂಲಕ ಉಳ್ಳವರು ಭೋವಿ (ಒಡ್ಡರ) ಸಮುದಾಯದ ಕುಲ ಕಸುಬನ್ನು ಕಸಿದುಕೊಳ್ಳುತ್ತಿದ್ದಾರೆ. ಬಡ ಕೂಲಿ ಕಾರ್ಮಿಕರಿಗೆ ಪಾರಂಪರಿಕ ಕೆಲಸ ಮುಂದುವರಿಸಲು ಅವಕಾಶ ಮಾಡಿಕೊಡುವ ಅಗತ್ಯವಿದೆ. ಸ್ಫೋಟಕಗಳ ಬಳಕೆರಹಿತ ಗಣಿಗಾರಿಕೆ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲು ಕಾನೂನು ರೂಪಿಸಬೇಕಿದೆ’ ಎಂದು ಪತ್ರದಲ್ಲಿ ಕೋರಿದ್ದಾರೆ.

‘ಭೋವಿ ಜನಾಂಗದ ಅನಾದಿ ಕಾಲದ ಪರಿಶ್ರಮವು ದೇಗುಲ ಹಾಗೂ ಶಾಸನಗಳಲ್ಲಿ ಅಮರವಾಗಿದೆ. ಈ ಜನಾಂಗ ಕಲ್ಲು, ಬಂಡೆ ತೆಗೆಯುವ ಕೌಶಲ ಕಲಿಯದೇ ಇದ್ದಿದ್ದರೆ ಗತಕಾಲದ ವೈಭವ, ಇತಿಹಾಸ, ಸಂಸ್ಕೃತಿಯನ್ನು ಇಂದಿನ ಪೀಳಿಗೆ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಕೆರೆ, ಕಟ್ಟೆ, ಕಾಲುವೆ, ಅಣೆಕಟ್ಟೆ ನಿರ್ಮಾಣದಲ್ಲಿ ಸಮುದಾಯದ ಪಾತ್ರ ಪ್ರಮುಖವಾಗಿದೆ. ಸಮುದಾಯದವರ ಜೀವನ ದುಸ್ತರವಾಗಿದ್ದು, ಕೆಲ ಕಾನೂನು ಬದಲಾವಣೆಯ ಅಗತ್ಯವಿದೆ’ ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT