ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ನೀರಿಗಾಗಿ ಪ್ರಾರ್ಥಿಸಿ ಕಾಲ್ನಡಿಗೆ ಜಾಥಾ

Last Updated 25 ಆಗಸ್ಟ್ 2018, 12:28 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿದು ಬರಲಿ ಎಂದು ಪ್ರಾರ್ಥಿಸಿ ಶನಿವಾರ ಜೀವ ವಿಮಾ ಪ್ರತಿನಿಧಿಗಳು ನಗರದಿಂದ ವಾಣಿವಿಲಾಸ ಜಲಾಶಯದವರೆಗೆ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾಕ್ಕೆ ಹಿರಿಯ ಪತ್ರಕರ್ತ ಜಟಂಗಿ ರಾಮಯ್ಯ ಚಾಲನೆ ನೀಡಿದರು.

ವೇದಾವತಿ ನದಿಗೆ ಮೈಸೂರು ಒಡೆಯರು ನಿರ್ಮಿಸಿದ್ದ ವಾಣಿವಿಲಾಸ ಜಲಾಶಯ ಬತ್ತಿ ಹೋಗಲು ಬಿಡಬಾರದು. ರೈತಸಂಘದ ನೇತೃತ್ವದಲ್ಲಿ 2007 ರಲ್ಲಿ ನಡೆದ 540 ದಿನಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ಸಿಕ್ಕಿತು. ನೀರು ಪಡೆಯಲು ಬೀದಿಗಿಳಿದು ಹೋರಾಟ ನಡೆಸಬೇಕು. ಜಲಾಶಯಕ್ಕೆ ನೀರು ಬರದೇ ಇರಲು ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿರ್ಮಾಣಗೊಂಡಿರುವ ಕೆರೆಕಟ್ಟೆಗಳು, ಒಡ್ಡುಗಳು, ಚೆಕ್ ಡ್ಯಾಂಗಳು ಕಾರಣ ಎಂದು ತಿಳಿಸಿದರು.

ನಿವೃತ್ತ ಯೋಧ ಸಿ. ಯೋಗರಾಜ್ ಮಾತನಾಡಿ, ‘ಜಲಾಶಯದ ಅಣೆಕಟ್ಟೆಯ ರಕ್ಷಕಿ ಎಂದೇ ಖ್ಯಾತಿ ಪಡೆದಿರುವ ಕಣಿವೆ ಮಾರಮ್ಮ ದೇವಿಗೆ ಜಲಾಶಯ ತುಂಬಿಸುವಂತೆ ಪ್ರಾರ್ಥಿಸಿ ಪೂಜೆ ಸಲ್ಲಿಸಲು ವಿಮಾ ಪ್ರತಿನಿಧಿಗಳು ಹಮ್ಮಿಕೊಂಡಿರುವ ಜಾಥಾ ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ’ ಎಂದರು.

ವಿಮಾ ಪ್ರತಿನಿಧಿಗಳ ಸಂಘದ ಶಿವಮೊಗ್ಗ ವಿಭಾಗದ ಉಪಾಧ್ಯಕ್ಷ ಪೂಜಾರ್ ನರಸಪ್ಪ, ಸ್ಥಳೀಯ ಸಂಘದ ಅಧ್ಯಕ್ಷ ರವೀಂದ್ರನಾಥ್, ಶಾಖಾ ಉಪ ವ್ಯವಸ್ಥಾಪಕ ಕೃಷ್ಣಪ್ಪ, ಕರೇಗೌಡ್ರು, ಮೋಹನ್ ಹೆಗಡೆ, ಗಂಗಾಧರ್, ಪಿ.ವಿ. ನಾಗರಾಜ್, ಗುರುನಾಥ್, ಎಚ್.ಎನ್. ವೆಂಕಟೇಶ್, ಕೇಶವಮೂರ್ತಿ, ಕೃಷ್ಣಪ್ರಸಾದ್, ಹನುಮಂತಯ್ಯ, ಉಮೇಶ್ ಗುಡಾಣಮಠ್, ಇಂದ್ರಕುಮಾರಿ, ವತ್ಸಲ, ಪುಷ್ಪಾವತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT