ಅನೈರ್ಮಲ್ಯ ತಾಣವಾಗಿರುವ ಚಿತ್ರದುರ್ಗದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಕಚೇರಿ ಆವರಣ
ಚಿಕ್ಕಜಾಜೂರಿನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಬಿದ್ದಿರುವ ಕಸದ ರಾಶಿ
ಹಿರಿಯೂರು ತಾಲ್ಲೂಕು ಕಚೇರಿ ಆವರಣದಲ್ಲಿ ದ್ವಿಚಕ್ರ ವಾಹನ ಅಡ್ಡಾದಿಡ್ಡಿ ನಿಲ್ಲಿಸಿರುವುದು

ಜಿಲ್ಲಾ ಕೇಂದ್ರ ಸರ್ಕಾರಿ ಕಚೇರಿ ಆವರಣಗಳು ಸ್ಛಚ್ಛತೆಯಿಂದ ದೂರವಾಗಿವೆ. ನಿತ್ಯ ಒಂದಿಲ್ಲೊಂದು ಕೆಲಸಕ್ಕೆ ಬರುವ ಜನರು ಅನೈರ್ಮಲ್ಯ ವಾತಾವರಣ ಕಂಡು ಬೇಸರಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಇತ್ತ ಗಮನಹರಿಸಿ ಸ್ವಚ್ಛತೆಗೆ ಕ್ರಮವಹಿಸಬೇಕು.
ಎಚ್.ಕೆ.ಎಸ್.ಸ್ವಾಮಿ ಪರಿಸರವಾದಿ
ಗ್ರಾಮದ ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ದೂರವಾಗಿದೆ. ಗ್ರಾಮ ಪಂಚಾಯಿತಿ ಆವರಣದ ಸುತ್ತಮುತ್ತಲ ಪ್ರದೇಶ ನೀರು ನಿಲ್ಲುವ ತಾಣವಾಗಿದೆ. ಕೂಡಲೇ ಸಂಬಂಧಪಟ್ಟವರು ಕ್ರಮವಹಿಸಬೇಕು.
ರುದ್ರೇಶ್ ಗೂಡಂಗಡಿ ಮಾಲೀಕ
ಚಿಕ್ಕಜಾಜೂರಿನ ಕೃಷಿ ಉಪ ಮಾರುಕಟ್ಟೆ ರೈತರಿಗೆ ರೋಗ ತರುವ ತಾಣವಾಗಿ ಮಾರ್ಪಟ್ಟಿದೆ. ಕಸದ ರಾಶಿ ತ್ಯಾಜ್ಯ ಬಿದ್ದಿರುವ ಕಾರಣ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಎಂ.ಜಿ. ಪ್ರಭುದೇವ್ ರೈತ