ಕಲ್ಲಿನಕೋಟೆ ಕೋಟೆ ಬಾಗಿಲುಗಳನ್ನು ದುರಸ್ತಿ ಮಾಡಿ ಸಂರಕ್ಷಿಸುವ ಅಗತ್ಯ ಇದೆ ಎಂದು ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಸಂರಕ್ಷಣಾ ವಿಭಾಗಕ್ಕೆ ವರದಿ ನೀಡಿದ್ದೇವೆ
ಜಿ.ಪ್ರಹ್ಲಾದ್ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ
‘ಗಾರೆ ಕೆಲಸ ಮಾಡಿಸಿ’
‘2000 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿರುವ ಕೋಟೆ ಆವರಣದಲ್ಲಿ ನೂರಾರು ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅವುಗಳನ್ನು ಪ್ರವಾಸಿಗರ ವೀಕ್ಷಣೆಯಿಂದ ದೂರ ಇಡಲಾಗಿದೆ. ಸ್ಮಾರಕಗಳ ಚುರುಕಿ ಉದುರುತ್ತಿದ್ದು ಶಿಥಿಲಗೊಳ್ಳುತ್ತಿವೆ. ಅವುಗಳಿಗೆ ಚುರುಕಿ ಹಾಕಿಸಿ ದಶಕಗಳೇ ಕಳೆದಿವೆ. ಮತ್ತೆ ಚುರುಕಿ ಹಾಕಿಸಲು ಎಎಸ್‌ಐ ಅಧಿಕಾರಿಗಳು ಗಾರೆ ಕೆಲಸದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ’ ಎಂದು ಪ್ರವಾಸಿ ಮಾರ್ಗದರ್ಶಿಗಳು ಒತ್ತಾಯಿಸಿದರು.