ಹಿರಿಯೂರು ತಾಲ್ಲೂಕಿನ ಐಮಂಗಲ ಸಮೀಪ 16 ಎಕರೆಯಲ್ಲಿ ಟ್ರಕ್ ಟರ್ಮಿನಲ್

7
ಸ್ಥಳ ಪರಿಶೀಲಿಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

ಹಿರಿಯೂರು ತಾಲ್ಲೂಕಿನ ಐಮಂಗಲ ಸಮೀಪ 16 ಎಕರೆಯಲ್ಲಿ ಟ್ರಕ್ ಟರ್ಮಿನಲ್

Published:
Updated:
Deccan Herald

ಚಿತ್ರದುರ್ಗ: ಟ್ರಕ್‌ ಟರ್ಮಿನಲ್‌ ನಿರ್ಮಾಣಕ್ಕೆ ಹಿರಿಯೂರು ತಾಲ್ಲೂಕಿನ ಐಮಂಗಲ ಸಮೀಪ ಗುರುತಿಸಿದ 16 ಎಕರೆ ಭೂಮಿಯನ್ನು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಭಾನುವಾರ ಪರಿಶೀಲಿಸಿದರು.

ಚಿತ್ರದುರ್ಗ ಜಿಲ್ಲಾ ಪ್ರವಾಸದಲ್ಲಿರುವ ಸಚಿವರು ಹೊಳಲ್ಕೆರೆಯ ನೂತನ ಬಸ್‌ ನಿಲ್ದಾಣದ ಕಾಮಗಾರಿ ಪರಿಶೀಲಿಸಿ ಚಿತ್ರದುರ್ಗಕ್ಕೆ ಬಂದರು. ಹೊಳಲ್ಕೆರೆ– ಚಿತ್ರದುರ್ಗ ಮಾರ್ಗ ಮಧ್ಯದಲ್ಲಿ ನಿರ್ಮಾಣವಾಗುತ್ತಿರುವ ವಾಹನ ಪರೀಕ್ಷಾ ಪಥ, ವಿಭಾಗೀಯ ಕಚೇರಿ ಹಾಗೂ ಡಿಪೊಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘1.16 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿರುವ ಸಾರಿಗೆ ಸಂಸ್ಥೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇನ್ನೂ ಹಲವು ಕಾಮಗಾರಿಗಳಿಗೆ ಬೇಡಿಕೆಗಳು ಬರುತ್ತಿವೆ. ಹೀಗಾಗಿ, ಎಲ್ಲೆಡೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಟ್ರಕ್‌ ಟರ್ಮಿನಲ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಕೆಲಸಗಳನ್ನು ಶೀರ್ಘದಲ್ಲೇ ಪೂರೈಸಲಾಗುವುದು’ ಎಂದರು.

‘ನಗರ ಸಾರಿಗೆಯಿಂದ ಸಂಸ್ಥೆಗೆ ಲಾಭವಿಲ್ಲ. ಬೆಂಗಳೂರಿನಲ್ಲಿ ಪ್ರತಿ ತಿಂಗಳು ಸಂಸ್ಥೆಗೆ ₹ 30 ಕೋಟಿ ನಷ್ಟ ಉಂಟಾಗುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಸಾರಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಹಳೆ ಡಿಪೊಗಳಲ್ಲಿ ಬಸ್‌ ನಿಲ್ದಾಣ ನಿರ್ಮಿಸಿ ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗುವುದು. ಚಿತ್ರದುರ್ಗದಲ್ಲಿ ವರ್ಕ್‌ಶಾಪ್‌ ಕೂಡ ನಿರ್ಮಿಸಲಾಗುವುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !