ಶುಕ್ರವಾರ, ಮಾರ್ಚ್ 31, 2023
29 °C

ಚಿಕ್ಕಜಾಜೂರಿನಲ್ಲಿ ಸಾಧಾರಣ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು: ಪಟ್ಟಣದಲ್ಲಿ ಭಾನುವಾರ ಸಂಜೆ ಮಳೆ ಸುರಿಯಿತು. ಆರಂಭದಿಂದಲೂ ಸುರಿಯದಿದ್ದ ಆರಿದ್ರಾ ಮಳೆ ಕೊನೆಯ ದಿನವಾದ ಭಾನುವಾರ ಸುರಿದು ರೈತರಿಗೆ ಭರವಸೆ ಮೂಡಿಸಿತು.

ಬಿತ್ತನೆ ಮಾಡಿದ್ದ ಮೆಕ್ಕೆಜೋಳ, ಹತ್ತಿ, ಎಳ್ಳು ಬೆಳೆಗಳು 17 ದಿನಗಳಿಂದ ಮಳೆ ಇಲ್ಲದೆ ಬಾಡುತ್ತಿದ್ದವು. ಭಾನುವಾರ ಸುರಿದ ಮಳೆಯಿಂದ ಹೋಬಳಿಯ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸಮೀಪದ ವಿಶ್ವನಾಥನಹಳ್ಳಿ, ಹಿರಿಯೂರು, ದಂಡಿಗೇನಹಳ್ಳಿ, ಕಾಳಘಟ್ಟ, ವಡ್ಡರಹಟ್ಟಿಗಳಲ್ಲಿ 20 ನಿಮಿಷಗಳ ಕಾಲ ಸಾಧಾರಣ ಮಳೆಯಾಗಿದೆ.

‘ಎಡೆಕುಂಟೆ ಹೊಡೆಯುವಷ್ಟು ಮಳೆಯಾಗಿದೆ. ಬಾಡುತ್ತಿದ್ದ ಪೈರುಗಳಿಗೆ ಜೀವ ಬಂದಂತಾಗಿದೆ’ ಎಂದು ವಿಶ್ವನಾಥನಹಳ್ಳಿ ರೈತರಾದ ಶೇಖರಪ್ಪ, ಮಂಜಣ್ಣ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.