ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

Published 11 ಡಿಸೆಂಬರ್ 2023, 14:30 IST
Last Updated 11 ಡಿಸೆಂಬರ್ 2023, 14:30 IST
ಅಕ್ಷರ ಗಾತ್ರ

ಹಿರಿಯೂರು: 1962ರಿಂದ ಇಲ್ಲಿಯವರೆಗೂ ಸಾವಿರಾರು ವಿದ್ಯಾರ್ಥಿನಿಯರಿಗೆ ಬದುಕು ಕಟ್ಟಿಕೊಟ್ಟ ಕೀರ್ತಿ ಗಿರೀಶ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿನಿ ಎಚ್.ಎಸ್. ಸರೋಜ ಹೇಳಿದರು.

ನಗರದ ಗಿರೀಶ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿನಿಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘1962ರ ಸಮಯದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶಾಲೆ ಇರಲಿಲ್ಲ. ಎಷ್ಟೋ ಹೆಣ್ಣುಮಕ್ಕಳ ಓದು ಪ್ರಾಥಮಿಕ ಹಂತಕ್ಕೇ ನಿಲ್ಲುತ್ತಿತ್ತು. ಅಂತಹ ಸಮಯದಲ್ಲಿ ಗಿರೀಶ ಸಂಸ್ಥೆಯವರು ಬಾಲಕಿಯರಿಗೆ ಪ್ರತ್ಯೇಕ ಪ್ರೌಢಶಾಲೆ ಆರಂಭಿಸಿದರು. 1981ರಲ್ಲಿ ಪ್ರತ್ಯೇಕ ಪಿಯು ಕಾಲೇಜು ಆರಂಭಿಸಿದರು. ಇದರ ಫಲವಾಗಿ ಸಾವಿರಾರು ಮಹಿಳೆಯರು ವೈದ್ಯ, ಎಂಜಿನಿಯರ್, ಐಎಎಸ್, ಐಪಿಎಸ್, ರಾಜಕಾರಣಕ್ಕೆ ಹೋಗಲು ನಾಂದಿಯಾಯಿತು’ ಎಂದು ಹೇಳಿದರು.

‘ಇಲ್ಲಿ ಕಲಿತು ಹೋಗಿರುವ ಸಾವಿರಾರು ಕೈಗಳನ್ನು ಬೆಸೆದು ಈಗ ಓದುತ್ತಿರುವ, ಮುಂದೆ ಓದಲು ಬರುವ ಅಸಹಾಯಕ ಪ್ರತಿಭಾವಂತ ವಿದ್ಯಾರ್ಥಿನಿಯರ ಭವಿಷ್ಯದ ಕನಸುಗಳಿಗೆ ನೀರೆರೆಯೋಣ’ ಎಂದು ಅವರು ಮನವಿ ಮಾಡಿದರು.

ಸಂಸ್ಥೆಯ ಅಧ್ಯಕ್ಷ ಬಿ.ಎನ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಶಾಂತಮ್ಮಾಳ್, ಉಪಪ್ರಾಂಶುಪಾಲ ಜಿ.ಟಿ. ಮೋಕ್ಷನಾಥ್, ನಿವೃತ್ತ ಶಿಕ್ಷಕರಾದ ಎಚ್.ಟಿ. ಚಂದ್ರಶೇಖರಯ್ಯ, ಕೆ.ಆರ್. ಸಾವಿತ್ರಮ್ಮ, ಕೆ.ಎಸ್. ತಿಪ್ಪೇಸ್ವಾಮಿ ಹಾಗೂ ಹಳೆಯ ವಿದ್ಯಾರ್ಥಿನಿಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT