ಚಳ್ಳಕೆರೆಯಲ್ಲಿ ಆಟೊ ಮೇಲೆ ಪ್ರಯಾಣ ಮಾಡಿ ಕೆಳಗಿಳಿಯುತ್ತಿರುವ ವಿದ್ಯಾರ್ಥಿಗಳು
ಮೊಳಕಾಲ್ಮುರು: ಖಾಸಗಿ ಬಸ್ ದರ್ಬಾರ್
ಮೊಳಕಾಲ್ಮುರು ತಾಲ್ಲೂಕಿನಲ್ಲಿ ಸಾರಿಗೆ ಸಂಸ್ಥೆ ಸೌಲಭ್ಯ ತೀರಾ ಕಡಿಮೆ. ದೇವಸಮುದ್ರ ಹೋಬಳಿಯ ಶೇ80ರಷ್ಟು ಗ್ರಾಮಗಳಿಗೆ ಬಸ್ ಸೇವೆ ಇಲ್ಲ. ಜನರು ಆಟೊಗಳಲ್ಲಿ ಹೆದ್ದಾರಿಗೆ ಬರುತ್ತಾರೆ. ಇಲ್ಲವೇ ರಾಂಪುರಕ್ಕೆ ಬಂದು ಬಸ್ ಹತ್ತಬೇಕು. ಖಾಸಗಿ ಬಸ್‌ಗಳ ಜೊತೆಗೆ ಆಟೊ ಹಾವಳಿಯೂ ವಿಪರೀತವಾಗಿದೆ. ಇದರಿಂದ ಸಾಕಷ್ಟು ಅಪಘಾತ ನಡೆದು ಪ್ರಾಣಹಾನಿ ಆಗಿದೆ. 5 ವರ್ಷದ ಹಿಂದೆ ಆಟೊ ಅಪಘಾತದಲ್ಲಿ 18 ಜನ ಜೀವ ಕಳೆದುಕೊಂಡಿದ್ದರು. ವಿದ್ಯಾರ್ಥಿಗಳು ಸಹ ಪ್ರಾಣದ ಹಂಗು ತೊರೆದು ನಿತ್ಯ ಖಾಸಗಿ ಬಸ್ ಅಥವಾ ಆಟೊಗಳಲ್ಲೇ ಪ್ರಯಾಣ ಮಾಡಬೇಕಾಗಿದೆ. ಕೂಲಿ ಕಾರ್ಮಿಕರು ತಂಡ ಮಾಡಿಕೊಂಡು ಲಗೇಜ್ ಆಟೊಗಳಲ್ಲಿ ಬಳ್ಳಾರಿ ಸೇರಿದಂತೆ ಬೇರೆ ನಗರಗಳಿಗೆ ಹೋಗಿ ಬರುತ್ತಾರೆ. ರಾಂಪುರದಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರ ಆಟೊಗಳು ಇವೆ.
ಖಾಸಗಿ ಬಸ್‌ಗಳು ಟಾಪ್‌ನಲ್ಲಿ ಪ್ರಯಾಣಿಕರನ್ನು ಕೂರಿಸುತ್ತಿರುವ ಮಾಹಿತಿ ಇಲ್ಲ. ಈ ಕುರಿತು ಪರಿಶೀಲನೆ ಮಾಡಿ ಟಾಪ್ ಪ್ರಯಾಣ ಕಂಡುಬಂದರೆ ಬಸ್ ಮಾಲೀಕರು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು.
– ಭರತ್ ಕಾಳಸಿಂಘೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಚಿತ್ರದುರ್ಗ