ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರ ಸ್ವಾಮೀಜಿ ಅಗಲಿಕೆ: ಕಣ್ಣೀರಿಟ್ಟ ಮಾದಾರ ಚೆನ್ನಯ್ಯ ಸ್ವಾಮೀಜಿ

ವಿಡಿಯೊ ಸುದ್ದಿ
Last Updated 29 ಡಿಸೆಂಬರ್ 2019, 9:39 IST
ಅಕ್ಷರ ಗಾತ್ರ

ಚಿತ್ರದುರ್ಗ:ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಗಲಿಕೆಗೆ ಅಪಾರ ನೊಂದಿರುವ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಭಾನುವಾರ ಮಠದಲ್ಲಿ ಕಣ್ಣೀರಿಟ್ಟರು.

‘ಪೇಜಾವರ ಶ್ರೀ ಜೊತೆಗೆ ಹತ್ತು ವರ್ಷಗಳ ಒಡನಾಟವಿತ್ತು. ಅವರ ಪ್ರೀತಿಯ ಪುತ್ರನ ರೀತಿಯಲ್ಲಿ ಇದ್ದೆ. ಮಠದ ಶ್ರೇಯೋಭಿವೃದ್ಧಿ ಬಯಸಿ ಮಾರ್ಗದರ್ಶನ ನೀಡುತ್ತಿದ್ದರು. ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಕೂಡ ತುಂಬಲಾರದ ನಷ್ಟ ಉಂಟಾಗಿದೆ’ ಎನ್ನುವಾಗ ದುಃಖ ತಡೆಯಲು ಸಾಧ್ಯವಾಗದೇ ಕಣ್ಣೀರು ಸುರಿಸಿದರು.

‘ಪೇಜಾವರ ಶ್ರೀ ಸದಾ ನನ್ನ ಏಳಿಗೆ ಬಯಸುತ್ತಿದ್ದರು. ನಮಗೆ ಬಹುದೊಡ್ಡ ಆಸ್ತಿಯಾಗಿದ್ದರು. ಮೌಢ್ಯ, ಕಂದಾಚಾರ ಹೋಗಲಾಡಿಸಲು ಸಲಹೆ ನೀಡಿದ್ದರು. ಸಮಾಜದಲ್ಲಿರುವ ಮೇಲು–ಕೀಳು ತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸಿದರು. ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ’ ಎಂದು ಹೇಳಿದರು.

‘ಮೈಸೂರಿನಲ್ಲಿ ನಡೆದ ಸಾಮರಸ್ಯ ಯಾತ್ರೆ ಪೇಜಾವರ ಶ್ರೀ ಜೊತೆಗೆ ಬಾಂಧವ್ಯ ಬೆಸೆಯಿತು. ದಲಿತ ಕಾಲೊನಿಯಲ್ಲಿ ಪಾದಯಾತ್ರೆ ಮಾಡುವುದಕ್ಕೆ ಪೇಜಾವರ ಮಠದ ಸಂಪ್ರದಾಯಸ್ಥ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ‘ದಲಿತರ ಓಲೈಕೆಯ ನಾಟಕ’ ಎಂಬ ವಿಚಾರವಾದಿಗಳ ಟೀಕೆಗೂ ಅವರು ನೋವುಪಟ್ಟಿದ್ದರು‘ ಎಂದು ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT