ಭೂಸ್ವಾಧೀನಕ್ಕೆ ಅಡ್ಡಿ; ಕ್ರಮಕ್ಕೆ ಆಗ್ರಹ

7

ಭೂಸ್ವಾಧೀನಕ್ಕೆ ಅಡ್ಡಿ; ಕ್ರಮಕ್ಕೆ ಆಗ್ರಹ

Published:
Updated:
Deccan Herald

ಚಿತ್ರದುರ್ಗ: ಭೂ ಸ್ವಾಧೀನಕ್ಕೆ ಅಡ್ಡಿ ಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಮಿತಿ ಕಾರ್ಯಕರ್ತರು ಇಲ್ಲಿ ಗುರುವಾರ ಪ್ರತಿಭಟಿಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಕಾಲ ಪ್ರತಿಭಟಿಸಿದರು. ಚಳ್ಳಕೆರೆ ತಾಲ್ಲೂಕು ರೇಣುಕಾಪುರ ಗ್ರಾಮದ ಭೂರಹಿತರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಕಳೆದ 30 ಕ್ಕೂ ಹೆಚ್ಚಿನ ವರ್ಷಗಳಿಂದ ಜೀವನಕ್ಕಾಗಿ ತುಂಡು ಭೂಮಿ ಇಲ್ಲದೆ ಕೆಲವರು ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಆದ್ದರಿಂದ ಅಕ್ರಮ - ಸಕ್ರಮಕ್ಕೆ ಸಲ್ಲಿಸಿರುವ ಫಲಾನುಭವಿಗಳ ಅರ್ಜಿ ಪರಿಗಣಿಸಿ, ಯಾರೂ ಅಡ್ಡಿಪಡಿಸದಂತೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು ಎಂದು ಕೋರಿದರು.

ವೇದಿಕೆ ಜಿಲ್ಲಾ ಸಂಚಾಲಕ ಶಿವಮೂರ್ತಿ ಭೀಮನಕೆರೆ, ಪದಾಧಿಕಾರಿಗಳಾದ ಪಿ. ರೇಣುಕಮ್ಮ, ಎನ್. ಪ್ರಕಾಶ್, ಪಿ. ಜಯಣ್ಣ, ತಿಪ್ಪೇರುದ್ರಪ್ಪ ವಿಡುಪನಕುಂಟೆ, ಎನ್. ಹೊನ್ನೂರುಸ್ವಾಮಿ, ಹಿಮಂತರಾಜ್, ಸಿ. ದುರುಗಪ್ಪ, ಎಲ್. ತಿಮ್ಮಕ್ಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !