ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿತಿಮ್ಮಯ್ಯನಹಟ್ಟಿ ಕೆರೆ ಒಡೆಯುವ ಸಂಭವ

Last Updated 12 ಅಕ್ಟೋಬರ್ 2020, 8:18 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಕೆರೆ ಭರ್ತಿಯಾಗಿದ್ದು, ಏರಿ ಸಂಪೂರ್ಣ ಒಡೆದು ಹೋಗುವ ಸಂಭವವಿದೆ.

ಸಮೀಪದ ದೇವರಗುಡ್ಡದ ಸಾಲಿನಲ್ಲಿ ಮೂರು ದಿನದಿಂದ ಬರುತ್ತಿರುವ ಬಿರುಸಿನ ಮಳೆಗೆ ಕೆರೆ ಸಂಪೂರ್ಣ ಭರ್ತಿಯಾಗಿದೆ. ಕೋಡಿಯಲ್ಲಿ ನೀರು ಹೋಗದಿರುವುದರಿಂದ ಏರಿಯ ಮೇಲೆ ಕೊರಕಲು ಬಿದ್ದು ಸಾಕಷ್ಟು ನೀರು ಹರಿದು ಹೋಗುತ್ತಿದೆ.

‘ಕೆರೆಯ ದೊಡ್ಡಹಳ್ಳದ ಮೇಲೆ ಭದ್ರಾ ಮೇಲ್ದಂಡೆ ಯೋಜನೆಯ ಚಾನಲ್‌ ಹಾದು ಹೋಗಿದೆ. ಚಾನಲ್‌ ಕಾಮಗಾರಿಗೆ ಹೋಗುವ ಲಾರಿ, ಟಿಪ್ಪರ್‌, ಜೆಸಿಬಿಗಳು ಈ ಕೆರೆಯ ಏರಿಯನ್ನು ಎತ್ತರ ಹಾಗೂ ಅಗಲ ಮಾಡಿಕೊಂಡು ಸಂಚರಿಸುತ್ತಿದ್ದವು. ಈಗ
ಸರ್ವೀಸ್‌ ರಸ್ತೆ ಮಾಡಿಕೊಂಡಿ ರುವುದರಿಂದ ಏರಿ ಮೇಲೆ ಓಡಾಡುತ್ತಿಲ್ಲ. ಇದರಿಂದ ಏರಿ ದುರಸ್ತಿ ಮಾಡಿಸುವ ಗೋಜಿಗೆ ಯಾರೂ ಹೋಗಿಲ್ಲ’ ಎನ್ನುತ್ತಾರೆ ಗ್ರಾಮದ ಮುಖಂಡ ಡಿ.ಮಲ್ಲೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT