ಚಿಕ್ಕಜಾಜೂರು: ರಾಮನವಮಿ ಅಂಗವಾಗಿ ಭಾನುವಾರ ಗ್ರಾಮದಲ್ಲಿ ಆಂಜನೇಯಸ್ವಾಮಿ ಹಾಗೂ ರಾಮಕೃಷ್ಣ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.

ಗ್ರಾಮದ ರಾಮಕೃಷ್ಣ ದೇವಾಲಯದಲ್ಲಿ ಶ್ರೀರಾಮ, ಸೀತಾ, ಲಕ್ಷ್ಮಣ ಹಾಗೂ ಆಂಜನೇಯಸ್ವಾಮಿ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು.

ಪಲ್ಲಕ್ಕಿ ಉತ್ಸವ:

ರಾಮನವಮಿ ಅಂಗವಾಗಿ ಗ್ರಾಮದ ಕಾಂಗ್ರೆಸ್ ಸಿದ್ದಪ್ಪ ವಂಶಸ್ಥರಿಂದ ಆಂಜನೇಯ, ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಕೋಟೆಹಾಳ್ ಆಂಜನೇಯ ಸ್ವಾಮಿ ಉತ್ಸವಮೂರ್ತಿಗಳಿಗೆ ಕೊನೆ ಹಸೆ ಪೂಜೆ ನಡೆಸಲಾಯಿತು. ಹೂವಿನಿಂದ ಅಲಂಕಾರ ಮಾಡಿದ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.

ಸಂಜೆ ಉತ್ಸವ ಮೂರ್ತಿಗಳನ್ನು ದೇವಸ್ಥಾನಕ್ಕೆ ಕರೆ ತಂದ ನಂತರ ಉಚ್ಛಾಯ ನಡೆಯಿತು. ಸಣ್ಣ ರಥಕ್ಕೆ ದೊಡ್ಡೆಡೆ ಸೇವೆ ಸಲ್ಲಿಸಿ, ಮಹಾ ಮಂಗಳಾರತಿಯ ನಂತರ, ನೆರೆದಿದ್ದ ನೂರಾರು ಭಕ್ತರು ಬ್ರಹ್ಮರಥ ಎಳೆದರು.

ರಥೋತ್ಸವ ಇಂದು: ಸೋಮವಾರ ಮುಂಜಾನೆ 5.30 ಕ್ಕೆ ಆಂಜನೇಯಸ್ವಾಮಿಯ ರಥೋತ್ಸವ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮುಳ್ಳು ಪಲ್ಲಕ್ಕಿ ಹಾಗೂ ಎದುರುಗತ್ತಿ ಪವಾಡಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.