ಬುಧವಾರ, ಏಪ್ರಿಲ್ 1, 2020
19 °C

ಯತ್ನಾಳ್‌ ಆರೋಪಕ್ಕೆ ಸಾಣೇಹಳ್ಳಿ ಶ್ರೀ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರ ಬಗ್ಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ಮಾಡಿದ ಆರೋಪಕ್ಕೆ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸ್ವಾಮೀಜಿ ಆಡಿದ ಮಾತುಗಳ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ದೊರೆಸ್ವಾಮಿ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಕೇಳಿ ತುಂಬಾ ಬೇಸರವಾಗಿದೆ. ಅವರು ಇಂತಹ ತೆಗಳಿಕೆಗೆ ಮನ್ನಣೆ ನೀಡುವುದಿಲ್ಲ’ ಎಂದು ಸ್ವಾಮೀಜಿ ಹೇಳಿದ್ದಾರೆ.

‘ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಸುಸಂಸ್ಕೃತ ವ್ಯಕ್ತಿ. ವಯಸ್ಸು, ಅನುಭವ ಹಾಗೂ ಜ್ಞಾನದಲ್ಲಿ ಹಿರಿಯರು. ಯಾರಿಗೂ ಕೇಡು ಬಯಸದ ನಿರುಪದ್ರವಿ. ಸಮಾಜದಲ್ಲಿರುವ ಅನ್ಯಾಯಗಳ ವಿರುದ್ಧ ಪ್ರತಿಭಟನೆ ಮಾಡುವ ಮನೋಭಾವದವರು. ಇಂತಹ ಹಿರಿಯರ ಬಗ್ಗೆ ಅವಹೇಳ ಮಾಡುವುದು ತಮ್ಮ ವ್ಯಕ್ತಿತ್ವಕ್ಕೆ ತಾವೇ ಕಳಂಕ ಅಂಟಿಸಿಕೊಂಡಂತೆ’ ಎಂದು ಯತ್ನಾಳ್‌ ಹೆಸರು ಉಲ್ಲೇಖಿಸದೇ ಕಿಡಿಕಾರಿದ್ದಾರೆ.

‘ದೊರೆಸ್ವಾಮಿ ಅವರಂತಹ ಹಿರಿಯ ಜೀವಿಗಳು ಆನೆ ಇದ್ದಂತೆ. ಆನೆ ನಡೆದಾಡುವಾಗ ನಾಯಿ ಬೊಗಳಿದರೆ ಆನೆಗೆ ಯಾವ ತೊಂದರೆಯೂ ಆಗುವುದಿಲ್ಲ ಎಂಬುದನ್ನು ದೊರೆಸ್ವಾಮಿ ಬಗ್ಗೆ ಮಾತನಾಡುವವರು ಗಮನಿಸಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು