ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಪರೂಪದ ಕಲಾವಿದ ಶಂಕರ್ ನಾಗ್: ಸಿ.ಎಂ.ತಿಪ್ಪೇಸ್ವಾಮಿ

Published 13 ನವೆಂಬರ್ 2023, 14:08 IST
Last Updated 13 ನವೆಂಬರ್ 2023, 14:08 IST
ಅಕ್ಷರ ಗಾತ್ರ

ಹಿರಿಯೂರು: ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿರುವ ಅಪರೂಪದ ಕಲಾವಿದ ಶಂಕರ್ ನಾಗ್ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ತಿಳಿಸಿದರು.

ಶಂಕರ್ ನಾಗ್ ಅಭಿಮಾನಿಗಳ ಕಲಾ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಸಿರಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಕರ್ನಾಟಕ ಕಲೆ, ಸಾಹಿತ್ಯ, ಸಂಸ್ಕೃತಿಯ ಬೀಡು. ನಮ್ಮ ನಾಡನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹತ್ತಾರು ಕಲಾವಿದರಿದ್ದಾರೆ. ಶಂಕರ್ ನಾಗ್ ಅವರು ರಂಗಭೂಮಿ, ಚಲನಚಿತ್ರಗಳಲ್ಲಿ ನಟನಾಗಿ, ನಿರ್ದೇಶಕನಾಗಿ ತನ್ನ ಛಾಪು ಮೂಡಿಸಿದ್ದಾರೆ. ನಾಗ್ ಅವರದ್ದು ದೈತ್ಯ ಪ್ರತಿಭೆ. ಹೀಗಾಗಿ ಅಭಿಮಾನಿಗಳ ಮನದಲ್ಲಿ ಎಂದಿಗೂ ಜೀವಂತವಾಗಿರುತ್ತಾರೆ’ ಎಂದು ಅವರು ತಿಳಿಸಿದರು.

ಕಲಾ ವೇದಿಕೆ ಅಧ್ಯಕ್ಷ ಎಚ್.ಸಿ.ದಿವುಶಂಕರ್ ಮಾತನಾಡಿ, ‘ಶಂಕರ್ ನಾಗ್ ನನ್ನ ಆರಾಧ್ಯ ದೈವ. ಹೀಗಾಗಿ ಅವರ ಮರಣದ ನಂತರ ಅವರ ಹೆಸರಿನಲ್ಲಿ ಕಲಾವೇದಿಕೆ ಆರಂಭಿಸಿ ಸಾಮಾಜಿಕ ಸೇವೆ ಮಾಡಲಾಗಿದೆ. ಸಾವಿರಾರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ, ಸನ್ಮಾನ ಮಾಡಲಾಗಿದೆ. ನಗರದಲ್ಲಿ ಶಂಕರ್ ನಾಗ್ ಹೆಸರಿನಲ್ಲಿ ಕಲಾ ಭವನವೊಂದನ್ನು ನಿರ್ಮಿಸುವ ಕನಸಿದ್ದು ನಗರಸಭೆ ಸದಸ್ಯರು, ಇತರೆ ಜನಪ್ರತಿನಿಧಿಗಳು, ಶಂಕರ್ ನಾಗ್ ಅಭಿಮಾನಿಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಚಿತ್ರದುರ್ಗದ ರಾಜಕುಮಾರ್ ಕಲಾ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಪರುಶುರಾಮ್ ಗೋರಪ್ಪನವರ್ ಮಾತನಾಡಿದರು. ಸಾಮಾಜಿಕ ವಲಯ ಅರಣ್ಯಾಧಿಕಾರಿ ಈಶ್ವರಪ್ಪ, ಎಚ್.ಸಿ.ರುದ್ರಮುನಿ, ಶ್ರೀಪತಿ, ಜಗದೀಶ್, ಯಲ್ಲಪ್ಪ, ಸುರೇಶ್, ಶಿವಕುಮಾರ್, ಸಿದ್ದೇಶ್, ಹರ್ತಿಕೋಟೆ ಮಹಾಸ್ವಾಮಿ, ದಿಲೀಪ್, ಮೋಹನ್ ಕುಮಾರ್, ಎಂ.ಆರ್.ಅಮೃತ ಲಕ್ಷ್ಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT