ಶನಿವಾರ, ಮೇ 15, 2021
27 °C

ಕುರಿಗಾಹಿ ಕೊಲೆ: ಕುರಿಗಳ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭರಮಸಾಗರ: ಹೋಬಳಿಯ ಸಿರಿಗೆರೆ–ಹೊಸರಂಗಾಪುರ ಬಳಿಯ ಗೋಮಾಳದ ಸಮೀಪ ಗಂಗಾಧರಪ್ಪ ಎಂಬುವವರ ಅಡಿಕೆ ತೋಟದಲ್ಲಿ ಕುರಿಗಾಹಿಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಐದು ಕುರಿಗಳನ್ನು ಕಳವು ಮಾಡಿದ್ದು, ನಾಲ್ಕು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ರಾಮಜ್ಜ (60) ಕೊಲೆಯಾದವರು. ಅವರನ್ನು ಕೊಲೆ ಮಾಡಿ ದೇಹವನ್ನು ಅಡಿಕೆ ಗರಿಗಳಿಂದ ಮುಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಬುಧವಾರ ತೋಟದ ಕಾರ್ಮಿಕ ನೋಡಿದಾಗ ಅಡಿಕೆ ಗರಿಗಳ ಒಳಗೆ ರಾಮಜ್ಜ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪ್ರಕರಣದ ವಿವರ: ಸಿರಿಗೆರೆಯ ರುದ್ರಮ್ಮ ಜಯಪ್ಪ ಅವರ ಕುರಿಗಳನ್ನು ರಾಮಜ್ಜ ದಿನಗೂಲಿ ಆಧಾರದಲ್ಲಿ ಕಾಯುತ್ತಿದ್ದರು. ಏ.10ರಂದು ಕುರಿ ಕಾಯಲು ಹೋಗಿದ್ದರು. ಆದರೆ, ಸಂಜೆ ಎಷ್ಟು ಹೊತ್ತಾದರೂ ರಾಮಜ್ಜ ಬರಲಿಲ್ಲ. ಕುರಿಗಳು ಮಾತ್ರ ಮರಳಿದ್ದು, ಅದರಲ್ಲಿ 5 ಕುರಿಗಳು ಕಾಣೆಯಾಗಿದ್ದವು. ರಾಮಜ್ಜ ಹಾಗೂ ಕುರಿಗಳ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.

ಬುಧವಾರ ಬೆಳಿಗ್ಗೆ ತೋಟದ ಬಳಿ ಕೊಳೆತ ವಾಸನೆ ಬರುತ್ತಿದ್ದನ್ನು ಗಮನಿಸಿದ ಕಾರ್ಮಿಕ ಚಂದ್ರಪ್ಪ ಅಡಿಕೆ ಗರಿಗಳನ್ನು ತೆಗೆದಾಗ ಶವ ಪತ್ತೆಯಾಗಿದೆ.

‘ಕುರಿಗಳನ್ನು ಕದ್ದಿರುವ ದುಷ್ಕರ್ಮಿಗಳೇ ಕೊಲೆ ಮಾಡಿರಬಹುದು’ ಎಂದು ರುದ್ರಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು