ಚಿತ್ರದುರ್ಗ: ಶ್ರೀ ಶಾರದಾ ಬ್ಯಾಂಡ್... ಈ ಹೆಸರು ಹೇಳಿದರೆ ಸಾಕು, ಜಿಲ್ಲೆಯ ಜನರು ಕುಣಿಯುತ್ತಾರೆ. ಮನಸೂರೆಗೊಳ್ಳುವ ಕ್ಲಾರಿಯೊನೆಟ್, ಸ್ಯಾಕ್ಸೊಫೋನ್ ವಾದನಕ್ಕೆ ಬ್ಯಾಂಡ್ ಸೆಟ್ ತಾಳವಾದ್ಯವು ಕಲ್ಲು ಹೃದಯಗಳನ್ನೂ ಕರಗಿಸುತ್ತದೆ. ಬಣ್ಣಬಣ್ಣದ ಸಮವಸ್ತ್ರದೊಂದಿಗೆ 20 ಕಲಾವಿದರ ತಂಡ ವಾದ್ಯ ನುಡಿಸುತ್ತಿದ್ದರೆ ಕೇಳುಗರು ತಲೆದೂಗುತ್ತಾರೆ.

‘ಬ್ಯಾಂಡ್ ಬಸಣ್ಣ’ ಎಂದೇ ಪ್ರಸಿದ್ಧರಾಗಿದ್ದ ಕ್ಲಾರಿಯೊನೆಟ್ ಕಲಾವಿದ ವೀರಬಸಪ್ಪ ಶಾರದಾ ಬ್ಯಾಂಡ್ ಸ್ಥಾಪಿಸಿದ್ದರು. ಬರೋಬ್ಬರಿ 50 ವರ್ಷಗಳ ಕಾಲ ಅವರು ವಾದ್ಯಕ್ಕೆ ಧ್ವನಿಯಾಗಿದ್ದರು. ತಂದೆಯ ಹಾದಿಯಲ್ಲೇ ಮುನ್ನಡೆಯುತ್ತಿರುವ ಅವರ ಪುತ್ರ, ಖ್ಯಾತ ಕ್ಲೋರಿಯೊನೆಟ್, ಸ್ಯಾಕ್ಸೊಫೋನ್, ಕೀಬೋರ್ಡ್ ವಾದಕ ನಾದಯೋಗಿ ಎಸ್.ವಿ. ಗುರುಮೂರ್ತಿ ಅವರು ಬ್ಯಾಂಡ್ಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ‘ಶ್ರೀ ಶಾರದಾ ಬ್ರಾಸ್ ಬ್ಯಾಂಡ್ ಆರ್ಕೆಸ್ಟ್ರಾ’ ಮೂಲಕ 50 ವರ್ಷಗಳಿಂದ ಜನಮಾನಸದಲ್ಲಿ ನೆಲೆಯೂರಿದ್ದಾರೆ.

ಶತಮಾನದ ಇತಿಹಾಸ ಹೊಂದಿರುವ ಬ್ಯಾಂಡ್ ಈಗ ರಾಜ್ಯ, ಹೊರರಾಜ್ಯಗಳಲ್ಲೂ ಪ್ರಸಿದ್ಧಿ ಪಡೆದಿದೆ. ಲಕ್ಷಾಂತರ ವಿವಾಹ ಸಮಾರಂಭಗಳಲ್ಲಿ ಬ್ಯಾಂಡ್ ನುಡಿಸಿದ ಕೀರ್ತಿ ಈ ತಂಡಕ್ಕಿದೆ. ಉತ್ಸವ, ಸಮ್ಮೇಳನ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಛಾಪು ಮೂಡಿಸಿದೆ. ಬಿ.ಎ ಪದವೀಧರರಾಗಿದ್ದ ಗುರುಮೂರ್ತಿ ಅವರಿಗೆ ಸರ್ಕಾರಿ ಕೆಲಸ ಅರಸಿ ಬಂದಿತ್ತು. ಅದನ್ನು ತ್ಯಜಿಸಿದ ಅವರು ತಂದೆಯ ವಾದ್ಯವನ್ನೇ ಉಸಿರಾಗಿಸಿಕೊಂಡರು.

‘ತಂದೆ ತೀರಿಹೋದ ದಿನ ಶವದ ಮೆರವಣಿಗೆಯಲ್ಲಿ ಕಿಚ್ಚು ಹಿಡಿದು ಮುಂದೆ ಸಾಗುತ್ತಿದ್ದೆ. ಮೆರವಣಿಗೆ ನೋಡುತ್ತಿದ್ದ ಜನ ಅಪ್ಪನನ್ನು ನೆನೆದು ಕಣ್ಣೀರು ಹಾಕುತ್ತಿದ್ದರು. ತಮ್ಮ ಮದುವೆಯಲ್ಲಿ ಬ್ಯಾಂಡ್ ನುಡಿಸಿದ ದಿನವನ್ನು ನೆನೆಯುತ್ತಿದ್ದರು’ ಎಂದು ಗುರುಮೂರ್ತಿ ಭಾವುಕರಾದರು.

ಡಾ.ರಾಜ್ಕುಮಾರ್ ಅಭಿಮಾನಿಯೂ ಆಗಿರುವ ಗುರುಮೂರ್ತಿ ಅವರಿಗೆ ರಾಜಣ್ಣ ಹಾಡಿದ ಗೀತೆ ನುಡಿಸುವುದೆಂದರೆ ಇಷ್ಟ. ಹಲವು ಸಂದರ್ಭಗಳಲ್ಲಿ ರಾಜಣ್ಣನನ್ನು ಭೇಟಿಯಾಗಿದ್ದಾರೆ. ಅವರ ಮನೆಗೆ ತೆರಳಿ ಅವರೊಂದಿಗೆ ಇಡ್ಲಿ–ವಡೆ ತಿಂದ ಘಟನೆಯನ್ನು ಮನಸಾರೆ ನೆನೆಯುತ್ತಾರೆ. ರಾಜ್ಕುಮಾರ್ ದುರ್ಗಕ್ಕೆ ಬಂದಾಗ ಅವರ ಹಾಡು ನುಡಿಸುತ್ತಲೇ ಅವರ ಮೆರವಣಿಗೆ ನಡೆಸಿದ್ದಾರೆ.

ಡಾ.ರಾಜ್ಕುಮಾರ್ ಮೃತಪಟ್ಟಾಗ ಗುರುಮೂರ್ತಿ ಅವರು ದುರ್ಗದಲ್ಲಿ ನಡೆಸಿದ ಶ್ರದ್ಧಾಂಜಲಿ ಸಮಾರಂಭ ಐತಿಹಾಸಿಕವಾದುದು. ರಾಜಣ್ಣನ ಭಾವಚಿತ್ರವನ್ನು ಆನೆ ಮೇಲಿಟ್ಟು ನಗರದಾದ್ಯಂತ ಮೆರವಣಿಗೆ ಮಾಡಿದ ದಿನ ಜನರ ಮನಸ್ಸಿನಲ್ಲಿ ಈಗಲೂ ಇದೆ. ಗುರುಮೂರ್ತಿ ಅವರು ನುಡಿಸಿದ ‘ಶಿವಪ್ಪ ಕಾಯೋ ತಂದೆ’, ‘ಈ ದೇಹದಿಂದ ದೂರವಾದೆ ಏಕೆ ಆತ್ಮವೇ?’ ಗೀತೆಗಳನ್ನು ಕೇಳಿ ಜನರು ಬಿಕ್ಕಿಬಿಕ್ಕಿ ಅತ್ತ ಘಟನೆ ಇನ್ನೂ ಹಸಿರಾಗಿದೆ.

ಜೈನ ಸಮುದಾಯದ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೂ ಗುರುಮೂರ್ತಿ ಅವರ ತಂಡ ಬ್ಯಾಂಡ್ ಸಾಥ್ ನೀಡಿದೆ. ರಾಜ್ಯ ಮಾತ್ರವಲ್ಲದೇ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲೂ ತಮ್ಮ ಕಾರ್ಯಕ್ರಮ ನೀಡಿದೆ. ಅಲ್ಲದೇ ದಶಕಗಳಿಂದಲೂ ಜಿಲ್ಲೆಯಲ್ಲಿ ನಡೆಯುವ ಸ್ವಾಂತತ್ರ್ಯೋತ್ಸವ, ಗಣರಾಜ್ಯೋತ್ಸವಗಳಲ್ಲಿ ಅವರ ತಂಡ ಉಚಿತ ಕಾರ್ಯಕ್ರಮ ನೀಡುತ್ತಾ ಬಂದಿದೆ. ದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 75 ಕಲಾವಿದರ ತಂಡದಿಂದ ಕಾರ್ಯಕ್ರಮ ನೀಡಿದ್ದಾರೆ. 69ನೇ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಾಗಿರುವ ಗುರುಮೂರ್ತಿ ಅವರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಬಿರುದು, ಗೌರವಗಳು ಅರಸಿ ಬಂದಿವೆ.

ಅಪ್ಪ ಅದಷ್ಟೋ ಮದುವೆಗಳಲ್ಲಿ ಕೊಟ್ಟಷ್ಟು ಹಣ ಪಡೆದು ನುಡಿಸಿದ್ದಾರೆ.ಅವರು ಗಳಿಸಿದ ಪ್ರೀತಿ ಕಂಡು ನನ್ನ ಪದವಿ ಮರೆತು ವಾದ್ಯ ಹಿಡಿದೆ. ವಾದ್ಯ ನನಗೆ ಹಣ ಕೊಡದಿದ್ದರೂ ಗೌರವದ ಬದುಕು ಕೊಟ್ಟಿದೆ’
– ಎಸ್.ವಿ. ಗುರುಮೂರ್ತಿ, ಕಲಾವಿದ

ಅನಾಥ ಶವಗಳಿಗೆ ಮುಕ್ತಿ...

ಕಲಾವಿದ ಎಸ್.ವಿ.ಗುರುಮೂರ್ತಿ ಅವರು ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಮುಕ್ತನಾಥೇಶ್ವರ ದೇವಾಲಯ ಟ್ರಸ್ಟ್ ಗೌರವಾಧ್ಯಕ್ಷರಾಗಿರುವ ಅವರು ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಕೋವಿಡ್ ಅವಧಿಯಲ್ಲಿ ನೂರಾರು ಶವಗಳಿಗೆ ಸಂಸ್ಕಾರ ಮಾಡಿದ್ದಾರೆ. ಶವಸಾಗಿಸುವ ವಾಹನಕ್ಕೆ ಗುರುಮೂರ್ತಿ ಅವರೇ ಚಾಲಕರಾಗಿದ್ದು ತಂಡದ ಜೊತೆಗೂಡಿ ಸಂಸ್ಕಾರ ನೆರವೇರಿಸುತ್ತಾರೆ.

ಬಸವೇಶ್ವರ ಪುನರ್ಜ್ಯೋತಿ ನೇತ್ರ ಬ್ಯಾಂಕ್ ಸದಸ್ಯರೂ ಆಗಿರುವ ಅವರು ಇಲ್ಲಿಯವರೆಗೆ 2150 ಜನರ ನೇತ್ರದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾನಯೋಗಿ ಪಂಚಾಕ್ಷರಿ ಸಂಗೀತ ಬಳಗದ ಗೌರವಾಧ್ಯಕ್ಷರಾಗಿ ಹಲವು ಕಾರ್ಯಕ್ರಮ ನೀಡಿದ್ದಾರೆ. ಬ್ಯಾಂಡ್ ಸೆಟ್ ಮಾತ್ರವಲ್ಲದೇ ಸುಗಮ ಸಂಗೀತ ಜನಪದ ಸಂಗೀತ ಕಾರ್ಯಕ್ರಮಗಳಿಗೆ ಕೀಬೋರ್ಡ್ ಸಾಥಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.