ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೀರಭದ್ರೇಶ್ವರರು ಅವತಾರ ಪುರುಷರು: ಮಹಾಂತ ಶ್ರೀ

Published : 2 ಅಕ್ಟೋಬರ್ 2024, 14:32 IST
Last Updated : 2 ಅಕ್ಟೋಬರ್ 2024, 14:32 IST
ಫಾಲೋ ಮಾಡಿ
Comments

ಸೊರಬ: ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿದ ವೀರಭದ್ರೇಶ್ವರರು ದೈವೀ ಪುರುಷ ಆಗಿದ್ದರು ಎಂದು ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುಘಾ ಮಠದ ಆವರಣದಲ್ಲಿ ವೀರಭದ್ರೇಶ್ವರ ಜಯಂತ್ಯುತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಧರ್ಮದ ಮೇಲೆ ದಬ್ಬಾಳಿಕೆ ತಡೆಯುವುದಕ್ಕಾಗಿ ವೀರಭದ್ರೇಶ್ವರರ ಅವತಾರವಾಗಿತ್ತು. ವೀರಭದ್ರೇಶ್ವರ ಜಯಂತ್ಯುತ್ಸವದ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಿ ಅವರ ಧರ್ಮೋಪದೇಶಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

12ನೇ ಶತಮಾನದಲ್ಲಿ ಬಸವಾದಿ ಶರಣರ ಕಾಲಘಟ್ಟದಲ್ಲೂ ಧರ್ಮಕ್ಕೆ ಅಪಾಯ ಎದುರಾದಾಗ ದೇವರ ರೂಪದಲ್ಲಿ ಮಡಿವಾಳ ಮಾಚಿದೇವ ಉದಯಿಸಿದ್ದರು. ನಾವೆಲ್ಲರೂ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದರು.

ವಿವಿಧ ಜನಪದ ಕಲಾ ಮೇಳ ಹಾಗೂ ವೀರಗಾಸೆ ಕುಣಿತದೊಂದಿಗೆ ವೀರಭದ್ರೇಶ್ವರ ಸ್ವಾಮಿಯ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

ಜಡೆ ಸಂಸ್ಥಾನ ಮಠದ ಕುಮಾರ ಕೆಂಪಿನ ಸಿದ್ದ ವೃಷಬೇಂದ್ರ ಸ್ವಾಮೀಜಿ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಮದ್ಯ ಕರ್ನಾಟಕದ ಅಧ್ಯಕ್ಷ ಸಿ.ಪಿ.ಈರೇಶಗೌಡ, ವೇದಿಕೆಯ ಅಧ್ಯಕ್ಷ ಪಂಚಾಕ್ಷರಪ್ಪಗೌಡ ಬೆದವಟ್ಟಿ, ನಾಗರಾಜ ಗುತ್ತಿ, ಚಂದ್ರಶೇಖರ್, ಲಿಂಗರಾಜ್, ಸಂದೀಪ ಯಲವಳ್ಳಿ, ಸದಾನಂದಗೌಡ ಕಡಸೂರು, ರಾಜುಗೌಡ ತಾಳಗುಪ್ಪ, ಕೆರೆಸ್ವಾಮಿ ಗೌಡ, ರವಿ ಗೌಡ, ವೀರಭದ್ರ ಗೌಡ, ಶರತ್, ಗುರು, ನಂದೀಶ್, ರಾಜಶೇಖರ ಗೌಡ, ಸಂತೋಷ್, ಮಹೇಂದ್ರ, ಶಶಾಂಕ್, ಗಣೇಶ್, ಹರ್ಷಾ, ಪುಷ್ಪಾ, ರತ್ನಮ್ಮ, ರೇವತಿ, ಮಾನಸಾ, ಸುಧಾ, ಪುಷ್ಪಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT