ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

sslc result: ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ದಯಾನಿಧಿ

Published 9 ಮೇ 2023, 16:42 IST
Last Updated 9 ಮೇ 2023, 16:42 IST
ಅಕ್ಷರ ಗಾತ್ರ

ಹಿರಿಯೂರು: ‘ಜಿಲ್ಲೆಗೆ ಟಾಪರ್ ಆಗುತ್ತೇನೆ ಅಂದುಕೊಂಡಿರಲಿಲ್ಲ. ಅಪ್ಪ–ಅಮ್ಮನ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ, ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆ ಸಾಧ್ಯವಾಗಿದೆ’

ಎಸ್ಸೆಸ್ಸೆಲ್ಸಿಯಲ್ಲಿ 624 ಅಂಕಗಳನ್ನು ಪಡೆದು ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ನಗರದ ರಾಷ್ಟ್ರೀಯ ಅಕಾಡೆಮಿ ಶಾಲೆಯ ಎಸ್.ಪಿ. ದಯಾನಿಧಿ ತನ್ನ ಮನದಾಳದ ಮಾತುಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಅಪ್ಪ ಸುದರ್ಶನ ಚಕ್ರವರ್ತಿ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದಿದ್ದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಮ್ಮ ಶಿಲ್ಪ ಗೃಹಿಣಿಯಾಗಿದ್ದು ಬಿ.ಎ ಪದವೀಧರೆ. ಒಬ್ಬರು ವಿಜ್ಞಾನ ಮತ್ತೊಬ್ಬರು ಕಲಾ ಪದವೀಧರರಾಗಿದ್ದ ಕಾರಣಕ್ಕೆ ಬೇರೆ ಬೇರೆ ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಿದ್ದೆ. ಮನೆಯಲ್ಲಿ ಓದುವಾಗ ಒಂದಿಷ್ಟೂ ಶಬ್ಧವಾಗದಂತೆ ಎಚ್ಚರ ವಹಿಸುತ್ತಿದ್ದರು. ಪರೀಕ್ಷೆ ಮುಗಿದ ನಂತರ ನನಗೆ 624 ಅಂಕ ಬರುತ್ತದೆ ಎಂದು ಅಪ್ಪ ಲೆಕ್ಕ ಹಾಕಿ ಹೇಳಿದ್ದರು’ ಎಂದು ದಯಾನಿಧಿ ತಿಳಿಸಿದರು.

‘ಅಕ್ಕ ಕೃಪಾನಿಧಿ ನೀಟ್ ಪರೀಕ್ಷೆ ಬರೆದಿದ್ದಾಳೆ. ತಮ್ಮ ಹಯಗ್ರೀವ ಚಕ್ರವರ್ತಿ ನಾನು ಓದಿದ ಶಾಲೆಯಲ್ಲಿಯೇ ಆರನೇ ತರಗತಿ ಓದುತ್ತಿದ್ದಾನೆ. ನನಗೆ ಯಾವತ್ತೂ ಟ್ಯೂಷನ್‌ಗೆ ಹೋಗಬೇಕು ಅನಿಸಲಿಲ್ಲ. ಅಷ್ಟರಮಟ್ಟಿಗೆ ಪೋಷಕರ, ಶಿಕ್ಷಕರ ಸಹಕಾರ ಸಿಕ್ಕಿತ್ತು. ಪಿಯುನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತೇನೆ. ವೈದ್ಯಳಾಗುವ ಬಯಕೆ ಇದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT