ಚಿತ್ರದುರ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ತೆರೆದಿಟ್ಟಿರುವ ಆಹಾರ ಪದಾರ್ಥ
ಚಳ್ಳಕೆರೆ ಮುಖ್ಯ ರಸ್ತೆಯಲ್ಲಿರುವ ಎಗ್‌ರೈಸ್ ಪಾನಿಪೂರಿ ಅಂಗಡಿಗಳು
ಹೊಸದುರ್ಗದ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಪಕ್ಕದ ಫಾಸ್ಟ್‌ಫುಡ್ ಅಂಗಡಿಗಳ ದುಃಸ್ಥಿತಿ

ಅಸುರಕ್ಷಿತ ಆಹಾರ ಸೇವನೆಯಿಂದ ಅಪೌಷ್ಟಿಕತೆ ಸಮಸ್ಯೆ ಎದುರಾಗುತ್ತದೆ. ದೀರ್ಘಕಾಲೀನ ಸೇವನೆಯಿಂದ ಕ್ಯಾನ್ಸರ್ ಲಿವರ್ ಸಮಸ್ಯೆ ಹೃದ್ರೋಗದಂತಹ ಗಂಭೀರ ಅನಾರೋಗ್ಯ ಕಾಡುವ ಅಪಾಯ ಹೆಚ್ಚು. ಅನಿವಾರ್ಯ ಸಂದರ್ಭದಲ್ಲಿ ಶುಚಿತ್ವ ಗುಣಮಟ್ಟ ನೋಡಿ ಆಹಾರ ಸೇವಿಸಬೇಕು.
ಡಾ.ಎಸ್.ಮಧು ತಜ್ಞ ವೈದ್ಯ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಕೇಂದ್ರ
ಫಾಸ್ಟ್‌ಫುಡ್ ಮಾರಾಟ ಕೇಂದ್ರಗಳಲ್ಲಿ ದಿನಪೂರ್ತಿ ಆಹಾರ ಸಿಗುತ್ತದೆ. ನಿಷೇಧಿತ ರಾಸಾಯನಿಕ ಬಳಕೆ ಸಾಮಾನ್ಯವಾಗಿದೆ. ಇದರಿಂದ ಹೊಟ್ಟೆ ಕರುಳಿನ ಸೋಂಕು ಕಾಣಿಸಿಕೊಂಡು ವಾಂತಿ ಭೇದಿಯಾಗುತ್ತದೆ. ಅಧಿಕಾರಿಗಳು ಜಾಗೃತಿ ಮೂಡಿಸಬೇಕು
ಎನ್.ನಿಧಿ ವೈದ್ಯಕೀಯ ವಿದ್ಯಾರ್ಥಿನಿ
ನಗರದಲ್ಲಿ ಫುಡ್‌ಕೋರ್ಟ್‌ಗೆ ಜಾಗ ಗುರುತಿಸಲಾಗಿದೆ. ಬೀದಿಬದಿ ತಿಂಡಿ ತಿನಿಸು ವ್ಯಾಪಾರಿಗಳು ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಗೊಳಿಸುವ ಜತೆಗೆ ಕಠಿಣ ಕ್ರಮ ಜರುಗಿಸಲಾಗುತ್ತದೆ
ಎಸ್.ಲಕ್ಷ್ಮಿ ನಗರಸಭೆ ಪೌರಾಯುಕ್ತೆ