ಮೊಳಕಾಲ್ಮುರು: ವಿದ್ಯಾರ್ಥಿಗಳು ವಿದ್ಯೆ ಜೊತೆಗೆ ವ್ಯವಹಾರ ಜ್ಞಾನ ಮತ್ತು ಸ್ವ–ಉದ್ಯೋಗ ಚಟುವಟಿಕೆಗಳ ಅರಿವು ಹೊಂದುವ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ನಿರ್ಮಲಾದೇವಿ ಸಲಹೆ ಮಾಡಿದರು.

ಪಟ್ಟಣದ ಪಿಎಂಶ್ರೀ ಆದರ್ಶ ಕೇಂದ್ರೀಯ ವಿದ್ಯಾಲಯದಲ್ಲಿ ಶನಿವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಆಹಾರ ಮತ್ತು ವಾಣಿಜ್ಯ ಮೇಳದಲ್ಲಿ ಮಾತನಾಡಿದರು.

ವ್ಯಾಪಾರ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ಇದೆ. ವಿದ್ಯೆ ಜತೆಯಲ್ಲಿ ಈ ಜ್ಞಾನವನ್ನು ಅಳವಡಿಸಿಕೊಂಡಲ್ಲಿ ಸದೃಢ ಜೀವನ ಕಟ್ಟಿಕೊಳ್ಳಲು ಅನುಕೂಲವಾಗಲಿದೆ. ಜಂಕ್ ಆಹಾರ ತಿನ್ನುವುದರಿಂದ ಅನೇಕ ಅನಾರೋಗ್ಯ ಸಮಸ್ಯೆಗಳು ಮಕ್ಕಳನ್ನು ಕಾಡುತ್ತಿವೆ. ಪೋಷಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರು.

ಉಪ ಪ್ರಾಂಶುಪಾಲ ಎಂ. ಮಲ್ಲಿಕಾರ್ಜುನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ನಾಗರಾಜ್, ಉಪಾಧ್ಯಕ್ಷೆ ಎಸ್. ನಾಗವೇಣಿ, ಸದಸ್ಯೆ ಶಿಲ್ಪಾ, ಶಿಕ್ಷಕರಾದ ರೂಪಾ, ನಂದೀಶ್, ಎ. ಅನಿತಾ, ಡಿ. ವಿಜಯಲಕ್ಷ್ಮಿ, ವಿಜಯ್ ಕುಮಾರ್, ಶಿವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.