4
ಏರುತ್ತಿರುವ ಪ್ರತಿಭಟನೆ ಕಿಚ್ಚು ಮಕ್ಕಳಿಂದ ನಾಡಕಚೇರಿ ಮುತ್ತಿಗೆ

ವಿದ್ಯಾರ್ಥಿಗಳ ಪ್ರತಿಭಟನೆ 8ನೇ ದಿನಕ್ಕೆ

Published:
Updated:
ಪ್ರೌಢಶಾಲೆ ಆರಂಭಕ್ಕೆ ಒತ್ತಾಯಿಸಿ ಭರಮಸಾಗರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಭರಮಸಾಗರ:  ಸರ್ಕಾರಿ ಪ್ರೌಢಶಾಲೆಗಾಗಿ ವಿದ್ಯಾರ್ಥಿಗಳು ಪೋಷಕರು ಹಾಗೂ ವಿವಿಧ ಜನಪರ ಸಂಘಟನೆ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ನಾಡಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

 ಭರಮಸಾಗರ ಸುತ್ತಮುತ್ತಲ ನಂದೀಹಳ್ಳಿ, ಹೆಗಡೆಹಾಳು, ಹಂಪನೂರು, ಎಮ್ಮೇಹಟ್ಟಿ, ಗೊಲ್ಲರಹಟ್ಟಿ , ಹೆಗ್ಗೆರೆ, ರಂಗವ್ವನಹಳ್ಳಿ ಗ್ರಾಮಗಳಿಂದ 8ನೇ ತರಗತಿಗೆ 70, 9ನೇ ತರಗತಿಗೆ 53 ಮಕ್ಕಳು ಪ್ರವೇಶ ಪಡೆದಿದ್ದು, ಇವರೆಲ್ಲರೂ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.ಶಾಲೆಗೆ ಸೇರಿದ್ದರು.

ಶಾಸಕ ಎಂ. ಚಂದ್ರಪ್ಪ ಅವರಿಂದ ಶಾಲೆ ಉದ್ಘಾಟನೆಯಾಗಿದ್ದು, ಆದರೆ ಜುಲೈ 2ರಂದು ಶಾಲೆಯನ್ನು ರದ್ದುಪಡಿಸಿ  ದೊಡ್ಡಾಲಘಟ್ಟ ಗ್ರಾಮಕ್ಕೆ ಸ್ಥಳಾಂತರಿಸಿ ಇಲ್ಲಿಯ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಕ್ಕಳ ಭವಿಷ್ಯದ ಮೇಲೆ ಕಲ್ಲು ಹಾಕಿದಂತಾಗಿದ್ದು, ಇಲಾಖೆ ಅಧಿಕಾರಿಗಳು ಮಕ್ಕಳ ವಿಚಾರದಲ್ಲಿ ಚಲ್ಲಾಟವಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದರು.

ಡಿಡಿಪಿಐ, ಬಿಇಒ ಅವರು ಕನಿಷ್ಠ ಸ್ಥಳಕ್ಕೆ ಬಂದು ಮಕ್ಕಳನ್ನು ಸಂತೈಸಿಲ್ಲ ಬಡಮಕ್ಕಳೆಂದರೆ ಅವರಿಗೆ ಅಸಡ್ಡೆಯಾಗಿದೆ ಎಂದು ಆರೋಪಿಸಿದ ಪೋಷಕರು ನಾಡಕಚೇರಿಗೆ ಮುತ್ತಿಗೆ ಹಾಕಿ, ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಉಪ ತಹಸೀಲ್ದಾರ್ ಶಶಿಧರ್ ಅವರಲ್ಲಿ ಪಟ್ಟು ಹಿಡಿದರು.

ಶಾಲೆ ರದ್ದು ವಿಚಾರ ಸಂಬಂಧ ಶಾಸಕ ಎಂ. ಚಂದ್ರಪ್ಪ ಅವರು ಮಂಗಳವಾರ ಸದನದಲ್ಲಿ ಚರ್ಚಿಸುವುದಾಗಿ ಹೇಳಿದ್ದು, ಗ್ರಾಮದಲ್ಲಿ ಪ್ರೌಢಶಾಲೆ ಆರಂಭಿಸುವ ಭರವಸೆ ಇದೆ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು. 

ಮುಖಂಡರಾದ ಡಿ.ಬಿ.ರಾಜು, ಷಮೀಂಪಾಷಾ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !