ಸಾಸ್ವೆಹಳ್ಳಿ: ಸಮೀಪದ ಕುಳಗಟ್ಟೆಯ ನ್ಯಾಯಬೆಲೆ ಅಂಗಡಿಯಲ್ಲಿ ಜೂನ್ ತಿಂಗಳ ಪಡಿತರ ವಿತರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

‘ಜೂನ್ ತಿಂಗಳ ರಾಗಿಯನ್ನು ಕೆಲವರಿಗೆ ಮಾತ್ರ ವಿತರಿಸಲಾಗಿದ್ದು, ಉಳಿದವರಿಗೆ ರಾಗಿ ಇಲ್ಲ ಎಂದು ಹೇಳಿ ಕೇವಲ ಅಕ್ಕಿಯನ್ನು ನೀಡಲಾಗುತ್ತಿದೆ. ಇದು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ’ ಎಂದು ಹಾಲೇಶ್ ಗೌಡ್ರು ಆರೋಪಿಸಿದ್ದಾರೆ.

‘ಪಡಿತರ ವಿತರಣೆ ಮಾಡಿದರೂ ಯಾವುದೇ ರೀತಿಯ ಬಿಲ್ಗಳನ್ನು ನೀಡುತ್ತಿಲ್ಲ. ತೂಕದಲ್ಲಿ ಮೋಸ, ಪ್ರತಿ ಕುಟುಂಬದ ಪಡಿತರ ನೀಡುವಾಗ ಒಂದರಿಂದ ಎರಡು ಕೆ.ಜಿ ಕಡಿತಗೊಳಿಸಿ ಪಡಿತರ ನೀಡುತ್ತಾರೆ. ತಿಂಗಳಲ್ಲಿ ಕೇವಲ 2ರಿಂದ 3 ದಿನ ಮಾತ್ರ ನ್ಯಾಯಬೆಲೆ ಅಂಗಡಿಯನ್ನು ತೆರೆಯಲಾಗುತ್ತದೆ. ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ಇದರಿಂದ ಗ್ರಾಹಕರಿಗೆ ಬಹಳ ತೊಂದರೆಯಾಗುತ್ತಿದೆ’ ಎಂದು ದೂರಿದ್ದಾರೆ.

‘ಜೂನ್ ತಿಂಗಳ ರಾಗಿಯನ್ನು ಮಾರಿಕೊಂಡಿರುವ ಬಗ್ಗೆ ಅನುಮಾನಗಳಿವೆ. ನ್ಯಾಯಬೆಲೆ ಅಂಗಡಿಯ ಮುಂದೆ ಯಾವುದೇ ರೀತಿಯ ಮಾಹಿತಿ ಫಲಕಗಳನ್ನು ಹಾಕಿರುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಆಂಜನೇಯ, ಹನುಮಂತ, ಲೋಕೇಶ್ ಮತ್ತು ಯೋಗೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.