ಮಂಗಳವಾರ, ಮೇ 17, 2022
25 °C
ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಕೈವಾಡಸ್ತರ ಸಭೆ

26ಕ್ಕೆ ತೇರುಮಲ್ಲೇಶ್ವರ ರಥೋತ್ಸವ: ಜಿ.ಎಚ್. ಸತ್ಯನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದಿರುವ ನಗರದ ತೇರುಮಲ್ಲೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವ ಫೆ. 26ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ಮುಜರಾಯಿ ಅಧಿಕಾರಿ ಜಿ.ಎಚ್. ಸತ್ಯನಾರಾಯಣ ತಿಳಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕೈವಾಡಸ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಫೆ. 16ರಂದು ರಾತ್ರಿ 8ಕ್ಕೆ ಕಂಕಣ ಕಲ್ಯಾಣೋತ್ಸವ, ಪೆ. 17ರಂದು ರಾತ್ರಿ 8ಕ್ಕೆ ಗಿಳಿ ವಾಹನೋತ್ಸವ, ಫೆ. 18ರಂದು ಗಂಡಭೇರುಂಡ ವಾಹನೋತ್ಸವ, ಫೆ. 19ರಂದು ನವಿಲು ವಾಹನೋತ್ಸವ, ಫೆ. 20ರಂದು ಸಿಂಹ ವಾಹನೋತ್ಸವ, ಫೆ. 21ರಂದು ನಂದಿ ವಾಹನೋತ್ಸವ, 22ರಂದು ಸರ್ಪವಾಹನೋತ್ಸವ, 23ರಂದು ಅಶ್ವ ವಾಹನೋತ್ಸವ, 24ರಂದು ಗಜ ವಾಹನೋತ್ಸವ, 25ರಂದು ಬಸವ ವಾಹನೋತ್ಸವ (ದೊಡ್ಡ ಉತ್ಸವ) ಅಕ್ಕಿ ತಂಬಿಟ್ಟಿನ ಆರತಿ ನಡೆಯಲಿದೆ ಎಂದು ಹೇಳಿದರು.

ಫೆ. 26ರಂದು ತಾಲ್ಲೂಕಿನ ಬೀರೇನಹಳ್ಳಿ ಮಜುರೆ ಕರಿಯಣ್ಣನಹಟ್ಟಿಯ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಮಧ್ಯಾಹ್ನ 12ಕ್ಕೆ ಸ್ವಾಮಿಯ ಬ್ರಹ್ಮ ರಥೋತ್ಸವ, ಸಂಜೆ 5ಕ್ಕೆ ಚಂದ್ರಮೌಳೇಶ್ವರ ಮತ್ತು ಉಮಾಮಹೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ. ಫೆ. 28ರಂದು ರಾತ್ರಿ 8ಕ್ಕೆ ಸುಮಂಗಲಿಯರಿಂದ ಕರ್ಪೂರದಾರತಿ, ಮಾರ್ಚ್ 1ರಂದು ರಾತ್ರಿ 8ಕ್ಕೆ ಚಿಟುಗು ಮಲ್ಲೇಶ್ವರ ದೇಗುಲದಲ್ಲಿ ಅಭಿಷೇಕ, ಸಂದರ್ಶನ, ಉಯ್ಯಾಲೋತ್ಸವ, ವಸಂತೋತ್ಸವ, ಓಕಳಿ ಪಾರ್ವಟೋತ್ಸವ, ಮಾರ್ಚ್ 2ರಂದು ಮಧ್ಯಾಹ್ನ 12ಕ್ಕೆ ಕಂಕಣ ವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ ಎಂದು ವಿವರಿಸಿದರು.

ಸಭೆಯಲ್ಲಿ ಪೌರಾಯುಕ್ತೆ ಲೀಲಾವತಿ, ನಗರಸಭೆ ಸದಸ್ಯೆ ಶಿವರಂಜನಿ, ಕೈವಾಡಸ್ತರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು