ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರವಳ್ಳಿ ಕೆರೆಗೆ ಬಾಗಿನ ಸಮರ್ಪಿಸಿದ ಶಿವಮೂರ್ತಿ ಮುರುಘಾ ಶರಣರು

Last Updated 8 ನವೆಂಬರ್ 2021, 5:00 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮಾನವ ಅತಿಯಾದ ದುರಾಸೆಯಿಂದ ಪ್ರಕೃತಿ ನಾಶ ಮಾಡಲು ಮುಂದಾಗುತ್ತಿದ್ದಾನೆ. ಆದರೆ, ನಿಸರ್ಗ, ಕಾಲ, ಧರ್ಮವೇ ಮನುಕುಲವನ್ನು ದುರಸ್ತಿ ಪಡಿಸಲು ಮುಂದಾಗುತ್ತಿದೆ’ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರುಅಭಿಪ್ರಾಯಪಟ್ಟರು.

ಚಂದ್ರವಳ್ಳಿ ಕೆರೆಯಲ್ಲಿ ಚಂದ್ರವಳ್ಳಿ ವಾಯುವಿಹಾರಿ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ‘ಬಾಗಿನ ಸಮರ್ಪಣೆ, ಕೆರೆಗೆ ಮೀನಿನ
ಮರಿಗಳನ್ನು ಬಿಡುವ’ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

‘ಮಾನವನ ಎಲ್ಲಾ ರೀತಿಯ ಪ್ರಕೃತಿ ವಿರೋಧಿ ಚಟುವಟಿಕೆಯನ್ನುನಿಸರ್ಗ ನಿಯಂತ್ರಿಸುತ್ತಿದೆ.ಪ್ರಾದೇಶಿಕ ಅಸಮಾನತೆಯನ್ನು ಉಂಟು ಮಾಡಿದರೂ ಎಲ್ಲವನ್ನು ಸಮನ್ವಯಗೊಳಿಸುತ್ತಿದೆ. ಮಾನವರ ಅತಿಕ್ರಮಣದ ಕಾರಣಕ್ಕೆ ಕಾಡಿನಲ್ಲಿ ಇರಬೇಕಿದ್ದ ಪ್ರಾಣಿಗಳು ನಾಡಿನೊಳಗೆ ಬಂದು ದಾಳಿ ಮಾಡುತ್ತಿವೆ. ಪ್ರಕೃತಿ, ಪ್ರಾಣಿ, ಮಾನವರ ನಡುವೆ ಸಂಘರ್ಷ ನಡೆಯುತ್ತಿರುವುದುನಿಲ್ಲಬೇಕಾದರೆ ಕಾಡು ಪ್ರಾಣಿಗಳ ಸಂತತಿ ಉಳಿಸಬೇಕಿದೆ’ ಎಂದು ಸಲಹೆನೀಡಿದರು.

ಸಿದ್ದಯ್ಯನ ಕೋಟೆ ಬಸವಲಿಂಗ ಸ್ವಾಮೀಜಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ್, ಬಿಜೆಪಿ ಯುವ ಮುಖಂಡ ಸಿದ್ದಾರ್ಥ ಗುಂಡಾರ್ಪಿ, ಬಳಗದ ಎನ್. ಸತ್ಯನಾರಾಯಣಾಚಾರ್,ಓಂಕಾರಪ್ಪ, ಲಕ್ಷ್ಮಣ್, ಸುರೇಶ್, ಅರವಿಂದ್, ನಗರಸಭೆ ಸದಸ್ಯ ಜೆ. ಶಶಿಧರ್, ವಿಶ್ವಕರ್ಮ ಯುವಕ ಸಮಾಜದ ಅಧ್ಯಕ್ಷ ಸಂಜಯ್, ಶಂಕರಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT