ಹಿರಿಯೂರು: ಮೂರನೇ ಹಂತದ ರಕ್ತದ ಮಾದರಿ ಸಂಗ್ರಹ

ಹಿರಿಯೂರು: ತಾಲ್ಲೂಕಿನ ಭರಮಗಿರಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ತಂಡದವರು ಮೂರನೇ ಹಂತದ ರಕ್ತದ ಮಾದರಿ ಸಂಗ್ರಹಿಸಿದರು.
ಜಿಲ್ಲಾ ನೋಡಲ್ ಅಧಿಕಾರಿ ಡಾ. ಆರ್. ರಂಗನಾಥ್, ‘ಹೊಸ ರೂಪದಲ್ಲಿ ಬಂದಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಎಲ್ಲರ ಸಹಕಾರ ಬೇಕು. ಪ್ರತಿಯೊಬ್ಬರೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದುದು ಅನಿವಾರ್ಯ. ಸ್ವಚ್ಛತೆ ಕಡ್ಡಾಯ. ಮಾಸ್ಕ್ ಬಳಕೆಯಿಂದ ಕೆಲ ಮಟ್ಟಿಗೆ ವೈರಸ್ ಅನ್ನು ದೂರವಿಡಬಹುದು’ ಎಂದರು.
47 ಗ್ರಾಮಸ್ಥರ ರಕ್ತದ ಮಾದರಿ ಸಂಗ್ರಹಿಸಲಾಯಿತು. ಐಸಿಎಂಆರ್ ತಂಡದ ಡಾ. ಹಂಸವೇಣಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್, ವಿವಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಕಿರಣ್ ಈಶ್ವರ್, ಮೇಲ್ವಿಚಾರಕ ಕುಮಾರ್, ವೀಣಾ, ಗಿರೀಶ್, ಶೀಲ, ಲಕ್ಷ್ಮೀದೇವಿ, ಎಎಸ್ಐ ಮಂಜುನಾಥ್, ಮಾರುತಿ ಪ್ರಸಾದ್, ತಿಮ್ಮೇಶ್, ಐಸಿಟಿಸಿ ತಂಡದ ಸೌಮ್ಯ, ನಾಗರಾಜ್, ವಿನಯ್, ಪುಷ್ಪಾ, ನವೀದ್, ಭಾಗ್ಯಮ್ಮ, ಗೋಪಾಲರಾವ್, ಫರೀದಾಬೇಗಂ, ನಾಗಮ್ಮ ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.