ಬುಧವಾರ, ಅಕ್ಟೋಬರ್ 21, 2020
26 °C

ಪಾಣಿ ದೇಹಕ್ಕೆ ಅಂತಿಮ ಹಂತದ ಕೋವಿಡ್ ಪ್ರಾಯೋಗಿಕ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಬುಧವಾರ ಡಿ.ಸಿ.ಪಾಣಿ ಅವರಿಗೆ ಡಾ.ಪರಿತೋಷ್ ವಿ.ದೇಸಾಯ್ ಅಭಿನಂದಿಸಿದರು

ಹಿರಿಯೂರು: ನಗರದ ಕಾದಂಬರಿಕಾರ ಡಿ.ಸಿ.ಪಾಣಿ ಅವರ ದೇಹಕ್ಕೆ ಬುಧವಾರ ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಅಂತಿಮ ಹಂತದ ಕೋವಿಡ್–19 ಪ್ರಾಯೋಗಿಕ ಲಸಿಕೆಯನ್ನು ಸೇರಿಸಲಾಯಿತು.

‘ಪ್ರಜಾವಾಣಿ’ ಜತೆ ಮಾತನಾಡಿದ ಪಾಣಿ, ‘ಡಾ.ಪರಿತೋಷ್ ವಿ.ದೇಸಾಯ್ ಅವರು ವಿಶೇಷ ಫಾರ್ಮಾಜೆಟ್ ಮಷಿನ್ ಮೂಲಕ ಪ್ರಾಯೋಗಿಕ ಲಸಿಕೆಯನ್ನು ದೇಹದೊಳಗೆ ಸೇರಿಸಿದ್ದಾರೆ. 2020ರ ಆ. 16 ಮತ್ತು ಸೆ. 29ರಂದು ಒಂದು ಮತ್ತು ಎರಡನೇ ಪ್ರಯೋಗ ಮಾಡಿದ್ದರು. ಇದೊಂದು ಅವಿಸ್ಮರಣೀಯ ಘಟನೆ’ ಎಂದರು.

‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶನದಲ್ಲಿ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಯ ಪ್ರಯೋಗಕ್ಕೆ ಸ್ವಯಂ ಪ್ರೇರಣೆಯಿಂದ ಒಪ್ಪಿಗೆ ನೀಡಿದ್ದೆ. ಅತ್ಯಂತ ಪರಿಣಾಮಕಾರಿ ಲಸಿಕೆ ದೇಶದಲ್ಲೇ ಉತ್ಪಾದನೆ ಆಗಲಿದ್ದು, ಜನರನ್ನು ಭೀತಗೊಳಿಸಿರುವ ಕೋವಿಡ್–19 ಕಾಯಿಲೆ ಬಹುಬೇಗ ಅಂತ್ಯ ಕಾಣಲಿದೆ’ ಎಂದು ಪಾಣಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು