ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶಗಳನ್ನು ಪಾಲಿಸಿದವರು ಜನಮನದಲ್ಲಿ ಶಾಶ್ವತ: ಸಿರಿಗೆರೆಶ್ರೀ

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 30ನೇ ಶ್ರದ್ಧಾಂಜಲಿ ಕಾರ್ಯಕ್ರಮ
Last Updated 21 ಸೆಪ್ಟೆಂಬರ್ 2022, 5:52 IST
ಅಕ್ಷರ ಗಾತ್ರ

ಸಿರಿಗೆರೆ: ವ್ಯವಹಾರದ ಆಸೆಯಿಂದ ಆದರ್ಶಗಳು ಧೂಳಿಪಟವಾಗುತ್ತಿವೆ. ಆದರೆ ಆದರ್ಶಗಳನ್ನು ಪಾಲಿಸಿದವರು ಜನಮನದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಆದರ್ಶ ವ್ಯಕ್ತಿತ್ವದಿಂದ ಭಕ್ತರ ಹೃದಯ ಸಿಂಹಾಸನದಲ್ಲಿ ಸದಾ ನೆಲೆಸಿದ್ದಾರೆ ಎಂದು ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಅಭಿಪ್ರಾಯಪಟ್ಟರು.

ಇಲ್ಲಿನ ನೂತನ ಗುರುಶಾಂತೇಶ್ವರ ಭವನದ ಮುಂಭಾಗದ ಮಹಾಮಂಟಪದಲ್ಲಿ ಜರುಗಿದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 30ನೇ ಶ್ರದ್ಧಾಂಜಲಿ ಕಾರ್ಯಕ್ರಮದ ಮೊದಲನೆಯ ದಿನದ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

‘ಕೃಷಿ ವಿಶ್ವವಿದ್ಯಾಲಯ ಕುಲಪತಿ ಆರ್.ಸಿ. ಜಗದೀಶ್ ಅವರು ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿ
ಯಾಗಿದ್ದವರು. ನಮ್ಮ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಓದುತ್ತಿರುವ ನೀವೆಲ್ಲರೂ ದೇಶದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿಗಳಾಗಿ’ ಎಂದು ಆಶಿಸಿದರು.

‘ಸಿರಿಗೆರೆಯ ಹಿರಿಯ ಶ್ರೀಗಳು ತ್ಯಾಗ, ಬದ್ಧತೆಯಿಂದ ಸಮಾಜ ಕಟ್ಟಿದವರು. ಗ್ರಾಮೀಣ ಮಕ್ಕಳಿಗೆ ಅನ್ನ, ಅಕ್ಷರ ನೀಡಿ ದೇಶ ಕಟ್ಟುವ ಕೆಲಸ ಮಾಡಿದರು. ಸಾಂಸ್ಕೃತಿಕ ಮೌಲ್ಯಗಳನ್ನು ಬಿತ್ತುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಮಾಡಿಕೊಟ್ಟರು’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

‘ಸಿರಿಗೆರೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ನೀವು ಅದೃಷ್ಠಶಾಲಿಗಳು. ಇಲ್ಲಿನ ವಾತಾವರಣ ನಿಮ್ಮೆಲ್ಲ
ರನ್ನು ಸುಸಂಸ್ಕೃತರನ್ನಾಗಿಸಿದೆ. ಸಂಸ್ಕಾರ ಕಲಿಸಿದೆ. ಗ್ರಾಮೀಣ ಪ್ರದೇಶದ ಇಂತಹ ಒಳ್ಳೆಯ ಪರಿಸರದಲ್ಲಿ ಓದಿದ ವಿದ್ಯಾರ್ಥಿಗಳು ನಾಡಿನ ಸುಸಂಸ್ಕೃತ ಪ್ರಜೆಗಳಾಗುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ’ ಎಂದು ಜಿಲ್ಲಾಧಿಕಾರಿ ಕವಿತ ಎಸ್.ಮನ್ನಿಕೇರಿ ತಿಳಿಸಿದರು.

‘ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಪ್ರಾರಂಭಿಸಿದ ತ್ರಿವಿಧ ದಾಸೋಹದಿಂದ ಲಕ್ಷಾಂತರ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ‌‌ಕಲಿಸಿದರು. ವಚನ ಸಾಹಿತ್ಯ ಪರೀಕ್ಷೆಗಳ ಮೂಲಕ ಶಿವಶರಣರ ವಿಚಾರಧಾರೆಗಳನ್ನು ಪರಿಚಯಿಸಿದರು. ತರಳಬಾಳು ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ’ ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಕುಲಪತಿ ಆರ್.ಸಿ. ಜಗದೀಶ್ ತಿಳಿಸಿದರು.

ದಾವಣಗೆರೆ ಎಚ್.ಎಂ. ಕೊಟ್ರೇಶ್ ತಂಡ ವಚನಗೀತೆ ಹಾಡಿತು. ಹಿರೇಕೆರೂರು ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ, ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಚ್.ವಿ.ವಾಮ
ದೇವಪ್ಪ, ಪ್ರಧಾನ ಕಾರ್ಯದರ್ಶಿ
ಎಸ್.ಬಿ.ರಂಗನಾಥ್ ಇದ್ದರು.

ಮೈಸೂರಿನ ನಿವೃತ್ತ ಪ್ರಾಂಶುಪಾಲ ಚಂದ್ರಶೇಖರಯ್ಯ ‘ದಿಟ್ಟಹೆಜ್ಜೆ ಧೀರ ಸನ್ಯಾಸಿ’ ಕುರಿತು ಉಪನ್ಯಾಸ ನೀಡಿದರು.

ಸಾಂಸ್ಕೃತಿಕ ಸ್ಪರ್ಧೆ ವಿಜೇತರು: ಚಿತ್ರಕಲೆ: ನಿತ್ಯಶ್ರೀ ವಿ.ಕಮ್ಮಾರ್(ಪ್ರಥಮ), ಎಸ್.ಸಿ.ಜಯಲಕ್ಷ್ಮಿ(ದ್ವಿತೀಯ), ನಾಟಕ: ಎಸ್.ಬಿ.ಶ್ರವಣ ಮತ್ತು ಸಂಗಡಿಗರು (ಪ್ರಥಮ), ಭಾನುಪ್ರಿಯ ಮತ್ತು ಸಂಗಡಿಗರು(ದ್ವಿತೀಯ), ವಚಯ ಗಾಯನ: ಎಸ್.ಶುಭ ಮತ್ತು ಸಂಗಡಿಗರು(ಪ್ರಥಮ), ಬೃಂದಾ ಮತ್ತು ಸಂಗಡಿಗರು (ದ್ವಿತೀಯ), ವಚನನೃತ್ಯ: ಮುತ್ತಗದೂರು ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಶಾಲೆಯ ಪೂಜಾ ಮತ್ತು ಸಂಗಡಿಗರು(ಪ್ರಥಮ), ಹುಲಿಕಲ್ನ ಹಿರಿಯ ಪ್ರಾಥಮಿಕ ಶಾಲೆ ದಿವ್ಯ ಮತ್ತು ಸಂಗಡಿಗರು (ದ್ವಿತೀಯ), ಜನಪದ ನೃತ್ಯ: ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಮಿಕ ಶಾಲೆ, ಅನುಭವ ಮಂಟಪ ದಾವಣಗೆರೆ, ಹರ್ಷಿತ ಮತ್ತು ಸಂಗಡಿಗರು(ಪ್ರಥಮ), ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ‌ಶಾಲೆ ಪೂಜ ಮತ್ತು ಸಂಗಡಿಗರು, ಮುತ್ತಗದೂರು ಪೂಜಾ ಮತ್ತು ಸಂಗಡಿಗರು(ದ್ವಿತೀಯ) ಸ್ಥಾನವನ್ನು ಗಳಿಸಿದ್ದಾರೆ.

ಸಿರಿಗೆರೆಯ ನೀಲಾಂಬಿಕಾ ಬಾಲಿಕಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಜಿ.ವಿ.ಪ್ರೀತಿ ಸ್ವಾಗತಿಸಿದರು. ಬಸಮ್ಮ ಬಣಕಾರ್ ವಂದಿಸಿದರು. ಎಲ್.ಸ್ವಪ್ನ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT