ನಾಯಕನಹಟ್ಟಿ: ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ಮಹಾಜಾತ್ರೆ ಮಾರ್ಚ್ 6ರಂದು ನಡೆಯಲಿದ್ದು, ಸೋಮವಾರ ರಥದ ಗಾಲಿ ಪೂಜೆಯನ್ನು ನೆರವೇರಿಸಲಾಯಿತು.

ಮಧ್ಯಾಹ್ನ ಒಳಮಠದಲ್ಲಿ ಗುಗ್ಗರಿ ಹಬ್ಬದ ನಿಮಿತ್ತ ಬೇಯಿಸಿದ ಗುಗ್ಗರಿ ಹಾಗೂ ಪೂಜಾ ಸಾಮಗ್ರಿಗಳನ್ನು ದೇವಾಲಯದಿಂದ ಧಾರ್ಮಿಕ ವಾದ್ಯಗಳ ಮೂಲಕ ತೇರಿನವರೆಗೂ ಮೆರವಣಿಯಲ್ಲಿ ಕರೆತಲಾಯಿತು. ನಂತರ ಸಂಪ್ರದಾಯದಂತೆ ಗೌಡಗೆರೆ ಗ್ರಾಮದ ಆಚಾರ್ ವಂಶದ ನಾರಾಯಣಾಚಾರ್ ರಥದ ಪಂಚ ಗಾಲಿಗಳಿಗೆ ಪೂಜೆ ನೆರವೇರಿಸಿದರು.

ಗುಗ್ಗರಿ ಹಬ್ಬದ ನಂತರ ರಿಪೇರಿ ಸೇರಿದಂತೆ ರಥಕ್ಕೆ ಸಂಬಂಧಿಸಿದಂತೆ ಯಾವುದೇ ಕಾರ್ಯಗಳನ್ನು ನಡೆಸುವಂತಿಲ್ಲ. ಜೊತೆಗೆ ರಥೋತ್ಸವ 9 ದಿನಗಳು ಇರುವಾಗ ಸ್ವಾಮಿಗೆ ಕಂಕಣಧಾರಣೆಯಾಗಲಿದೆ. ನಂತರ ರಥಕ್ಕೆ ಕಲಶ ಸ್ಥಾಪನೆ ಹಾಗೂ ರಥದ ಅಲಂಕಾರಕ್ಕೆ ಚಾಲನೆ ನೀಡಲಾಗುತ್ತದೆ.

ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ, ದೇವಾಲಯ ಸಿಬ್ಬಂದಿ ಸತೀಶ್, ಶರಣಪ್ಪ, ಮಹಾದೇವ, ಶಿವಕುಮಾರ್, ಗ್ರಾಮಸ್ಥರಾದ ಎಂ.ವೈ.ಟಿ. ಸ್ವಾಮಿ, ಕೆ.ಎನ್. ತಿಪ್ಪೇರುದ್ರಪ್ಪ, ದಳವಾಯಿ ತಿಪ್ಪೇಸ್ವಾಮಿ, ದಳವಾಯಿ ಬೋರಯ್ಯ, ಯೋಗೀಶ, ಬಸವರಾಜ್, ದೊರೆತಿಪ್ಪೇಸ್ವಾಮಿ, ಗಿರಿಯಪ್ಪ, ಪಿ.ಯು. ಸುನೀಲ್ಕುಮಾರ್, ಆರ್. ತಿಪ್ಪೇಸ್ವಾಮಿ, ಉಮೇಶ್, ಮಹಾಂತೇಶ್, ಜಂಗಮಜೋತಿ ತಿಪ್ಪೇಸ್ವಾಮಿ, ಗೋವಿಂದರಾಜ್, ಬೆಸ್ಕಾಂ ಶಾಖಾಧಿಕಾರಿ ಎನ್.ಬಿ. ಬೋರಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.