ಶನಿವಾರ, ನವೆಂಬರ್ 26, 2022
23 °C

ವಾಹನ ಡಿಕ್ಕಿ: ತಿಪ್ಪೇರುದ್ರಸ್ವಾಮಿ ದೇವಾಲಯ ಬಾಗಿಲು ಜಖಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕನಹಟ್ಟಿ: ಇಲ್ಲಿನ ತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯಕ್ಕೆ ಶನಿವಾರ ಪೂಜೆಗೆ ಬಂದಿದ್ದ ಮಾರುತಿ ಇಕೋ ವಾಹನ ದೇವಾಲಯದ ಕಬ್ಬಿಣದ ಬಾಗಿಲಿಗೆ ಡಿಕ್ಕಿ ಹೊಡೆದು ವಾಹನ ಮತ್ತು ಬಾಗಿಲು ಜಖಂ ಆಗಿದೆ.

ತುರುವನೂರು ಗ್ರಾಮದ ವ್ಯಕ್ತಿಯೊಬ್ಬರು ವಾಹನ ಖರೀದಿಸಿದ್ದರು. ಇದರ ಪೂಜೆಗಾಗಿ ಕುಟುಂಬ ಸಮೇತ ಮನೆದೇವರಾದ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಬಂದಿದ್ದರು.

ವಾಹನ ಪೂಜೆಗಾಗಿ ಹೂವು, ನಿಂಬೆಹಣ್ಣು, ಕಾಯಿಗಳನ್ನು ಅರ್ಚಕರಿಗೆ ನೀಡಿ ನಿಂತಿದ್ದರು. ಆಗ ವಾಹನ‌‌ದಲ್ಲಿದ್ದ ಕುಟುಂಬದ ಯುವಕನೊಬ್ಬ ವಾಹನದ ಕೀ ತಿರುಗಿಸಿ ಅಕ್ಸಿಲೇಟರ್ ಒತ್ತಿದ್ದಾನೆ. ಆಗ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನದ ಒಂದು ಬದಿ ಜಖಂ ಆಗಿದ್ದು, ದೇವಾಲಯದ ಬಾಗಿಲೂ ಜಖಂ ಆಗಿದೆ.

‌‌ಭಕ್ತರು ಹಾಗೂ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ. ದೇವಾಲಯದ ಸಿಬ್ಬಂದಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು