ಸಿರಿಗೆರೆ: ‘ಹಳ್ಳಿಗಳಲ್ಲಿರುವ ಯುವಕರೂ ಇತ್ತೀಚೆಗೆ ಜಾನಪದ ಕಲೆಗಳಿಂದ ದೂರವಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗಿ ನಮ್ಮ ಮೂಲ ಕಲೆಗಳನ್ನು ಮರೆಯುತ್ತಿದ್ದಾರೆ’ ಎಂದು ಲಾವಣಿಕಾರ ಯುಗಧರ್ಮ ರಾಮಣ್ಣ ವಿಷಾದಿಸಿದರು.

ಭೀಮಸಮುದ್ರ ಸಮೀಪದ ತೊರೆಬೈಲು ಕಾಲೊನಿಯ ಉತ್ಸವ ಸೇವಾ ಸಮಿತಿ ಹಾಗೂ ಪಾಂಡುರಂಗ ಭಜನಾ ಮಂಡಳಿಯಿಂದ ಆಯೋಜಿಸಿದ್ದ 5ನೇ ವರ್ಷದ ಭಜನಾ ಕಮ್ಮಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾನಪದ ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಈ ಊರಿನ ಯುವಕರು ಭಜನಾ ಕಮ್ಮಟ ಏರ್ಪಡಿಸಿ ಆ ಕಲೆಗೆ ಜೀವ ತುಂಬುವ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ’ ಎಂದರು.

‘1982ರಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಭೀಮಸಮುದ್ರದಲ್ಲಿ ನಡೆದಿತ್ತು. ತರಳಬಾಳು ಮಠದ ಶಿವಕುಮಾರ ಸ್ವಾಮೀಜಿ ಅವರ ಅಪೇಕ್ಷೆಯಂತೆ ಮಹೋತ್ಸವದಲ್ಲಿ ಲಾವಣಿಗಳನ್ನು ಹಾಡಿದ್ದೆ. ನಾನೊಬ್ಬ ಅಕ್ಷರಜ್ಞಾನವೇ ಇಲ್ಲದ, ಸಾಂಪ್ರದಾಯಿಕ ಶಿಕ್ಷಣವೇ ಇಲ್ಲದ ವ್ಯಕ್ತಿ. ಇಂತಹವನಿಗೆ ಶ್ರೀಗಳು ಬೆನ್ನುತಟ್ಟಿ ಪ್ರೋತ್ಸಾಹಿಸಿದರು’ ಎಂದು ಹೇಳಿದರು.

‘ಒಂದನೆ ತರಗತಿ ಓದು ಪೂರೈಸಲಾಗದ ನಾನು ಗ್ರಾಮದ ಮನೆಯೊಂದರಲ್ಲಿ ರೈತಾಪಿ ಕೆಲಸ ಮಾಡಲು ಮುಂದಾಗಿದ್ದೆ. ಮುಂದೆ ದೈವಾನುಗ್ರಹದಿಂದ ಲಾವಣಿಗಳನ್ನು ರಚಿಸುವುದನ್ನು ಕಲಿತೆ. ಇಲ್ಲಿಯವರೆಗೆ ರಾಜ್ಯದಾದ್ಯಂತ 17,032 ಕಾರ್ಯಕ್ರಮಗಳನ್ನು ನೀಡಿದ್ದೇನೆ. ಇಂತಹ ಸಾಧನೆಯನ್ನು ಹಳ್ಳಿಗಳಲ್ಲಿನ ಯುವಕರು ಮಾಡಲು ಮುಂದಾಗಬೇಕು’ ಎಂದರು.

ಬಿಜೆಪಿ ಮುಖಂಡ ಜಿ.ಎಸ್. ಅನಿತ್ ಕುಮಾರ್ ಮಾತನಾಡಿದರು. ಕಮ್ಮಟದಲ್ಲಿ 19 ತಂಡಗಳು ಭಾಗಿಯಾಗಿದ್ದವು. ಶಿಕ್ಷಣ ಇಲಾಖೆಯ ಸಂಯೋಜಕರಾದ ಲೋಕೇಶ್, ಧರ್ಮಸ್ಥಳ ಸಂಘದ ನಿರ್ದೇಶಕರಾದ ಕಮಲೇಶ್, ಚಂದ್ ರವಿಚಂದ್ರ, ಕೃಷಿಕರಾದ ಬಿ.ಟಿ. ಪುಟ್ಟಪ್ಪ, ಶಂಕರಮೂರ್ತಿ, ಸಾಸಲು ದೇವಕುಮಾರ್, ಶಾಂತಲಾ ಬಿ.ಟಿ, ವೀರೇಶ್ ಟಿ.ಜಿ, ಅರುಣ್ ಕುಮಾರ್, ಶರತ್ ಪಟೇಲ್, ಡಿ.ಜಿ. ಮಲ್ಲಿಕಾರ್ಜುನ್ ಹಾಗೂ ಬಜನಾ ಕಮ್ಮಟದ ಎಲ್ಲ ಸದಸ್ಯರು, ಗ್ರಾಮಸ್ಥರು ಉಪಸಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.