ಚಿತ್ರದುರ್ಗ: ಖ್ಯಾತ ಹಾಸ್ಯ ಸಾಹಿತಿ ಬೀಜಿ ಅವರ ಜನ್ಮಶತಮಾನೋತ್ಸವ ಜುಲೈ 10ಕ್ಕೆ ನಗರದ ಕ್ರೀಡಾ ಸಂಕೀರ್ಣ ಭವನದಲ್ಲಿ ಆಯೋಜಿಸಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾ ಸಾಹಿತ್ಯ ಪರಿಷತ್ ಹಾಗೂ ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿರುವ ಈ ಸಮಾರಂಭ ಬೆಳಿಗ್ಗೆ ೧೦.-೩೦ಕ್ಕೆ ಆರಂಭವಾಗಲಿದ್ದು, ಸಂಶೋಧಕ ಡಾ.ಬಿ.ರಾಜಶೇಖರಪ್ಪ ಕಾರ್ಯಕ್ರಮ ಉದ್ಘಾಟಿಸುವರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ.ಜಿ.ಶರಣಪ್ಪ ಆಶಯ ನುಡಿಗಳನ್ನಾಡುವರು. ಬೆಳಿಗ್ಗೆ ೧೧.-೩೦ ರಿಂದ ನಡೆಯುವ ವಿಚಾರ ಗೋಷ್ಠಿಯಲ್ಲಿ ಬೀಚಿಯವರ ಬದುಕು ಮತ್ತು ಬರಹ ಕುರಿತು ಪ್ರೊ.ಎಚ್.ಎ. ಭಿಕ್ಷಾವರ್ತಿಮಠ್ ವಿಷಯ ಮಂಡಿಸುವರು. ಮಧ್ಯಾಹ್ನ ೧೨-.೩೦ ರಿಂದ ೧ ಗಂಟೆಯರವರೆಗೆ ನಡೆಯುವ ಎರಡನೇ ಗೋಷ್ಠಿಯಲ್ಲಿ ಬೀಚಿಯವರ ಬರಹಗಳಲ್ಲಿ ವಿಡಂಬನೆ ಕುರಿತು ಸಾಹಿತಿ ಮತ್ತು ಚಿಂತಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ವಿಚಾರ ಮಂಡಿಸುವವರು. ಮಧ್ಯಾಹ್ನ ೧ ರಿಂದ ೧-.೩೦ ರವರೆಗೆ ನಡೆಯುವ 3ನೇ ಗೋಷ್ಠಿಯಲ್ಲಿ ಬೀಚಿ ಅವರ ರೂಪಕಗಳು ಎಂಬ ವಿಷಯ ಕುರಿತು ಸಾಹಿತಿ ಈರಪ್ಪ ಎಂ.ಕಂಬಳಿ ವಿಷಯ ಮಂಡಿಸುವರು.

ಮಧ್ಯಾಹ ೩ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಾನಪದ ತಜ್ಞ ಮತ್ತು ಕಾದಂಬರಿಕಾರ ಡಾ.ಕೃಷ್ಣಮೂರ್ತಿ ಹನೂರು ಅವರು ಸಮಾರೋಪ ಭಾಷಣ ಮಾಡುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ೪.-೩೦ರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ ಎಂದು ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.