ಚಿತ್ರದುರ್ಗ: ‘ಐನೂರ್, ಐನೂರ್, ಐನೂರ್ ವೋಟಿಗೆ ಐನೂರ್. ಯಾರಿಗುಂಟು ಯಾರಿಗಿಲ್ಲ, ಹೊಸ ಎಲೆಕ್ಷನ್ ಆಫರ್. ಏನ್ ಮಚಾ ಇವ್ರೆಲ್ಲಾ ಹೀಂಗೆ ವೋಟ್‌ನ ದುಡ್ಡಿನಿಂದ ಕೊಂಡ್ಕೊತಾ ಇದ್ದಾರೆ. ಏನ್ ಮಾಡೋದು ಕರಪ್ಷನ್ ಮಚಾ. ದುಡ್ಡು ನಿಮ್ದು ಎಣ್ಣೆ ನಮ್ದು’...

ಜನಕ್ಕೆ ಹಾರ್ಟ್‌ಗೆ ಟಚ್ ಆಗೋದು ಅಂದ್ರೆ ಒನ್ ಅಂಡ್ ಓನ್ಲೀ ಮ್ಯೂಸಿಕ್ ಮತ್ತು ಸಾಂಗ್ಸ್ ಅಷ್ಟೇ. ಬಾ ಇದರಲ್ಲೇ ಏನಾದರೂ ಮಾಡಿ ಜನರಲ್ಲಿ ಜಾಗೃತಿ ಮೂಡಿಸೋಣ. ಹೀಗೆ ರ‍್ಯಾಪ್ ಸಾಂಗ್ ಪ್ರಾರಂಭವಾಗುತ್ತೆ.

‘ಬಂದಿದೆ ಬಂದಿದೆ ಚುನಾವಣೆ, ಆಗಲೇ ಬೇಕಿದೆ ಬದಲಾವಣೆ. ಅವರ ಜೇಬಲ್ಲಿ ನೋಟಿನ ಖದರ್, ನಿಮ್ಮ ಕೈಯಲ್ಲಿ ವೋಟಿನ ಪವರ್’ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಇಂದಿನಿಂದ ಹರಿದಾಡಲಿದೆ.

‘ಜಾತಿ, ಧರ್ಮಗಳ ಹೆಸರಲ್ಲಿ ಮತಗಳ ಬೇಟೆ ಆಡ್ತಾರೆ ಎಂಬ ಪದಗಳಿರುವ ಹಾಡು ಸದ್ದು ಮಾಡಲು ಸಿದ್ಧವಾಗಿದೆ ಎನ್ನುತ್ತಾರೆ ಸಂಗೀತ ಸಂಯೋಜನೆ ಮತ್ತು ನಟನೆ ಮಾಡಿರುವ ಬಿಸಿಎ ವಿದ್ಯಾರ್ಥಿ ವಿಷ್ಣು ಶರ್ಮಾ. ಗೀತೆಗೆ ಪ್ರೀತಮ್, ಬದ್ರಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಂಜನ್, ಸೂರ್ಯ ಕ್ಯಾಮೆರಾ ಹಿಡಿದ್ದಾರೆ’ ಎಂದು ನಿರ್ದೇಶಕ ಆರ್.ವಿನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಡುಗಡೆ: ಕಿರುಚಿತ್ರದ ಸಿ.ಡಿ ಬಿಡುಗಡೆ ಸಮಾರಂಭವೂ ಇಲ್ಲಿನ ರೋಟರಿ ಕ್ಲಬ್‌ನಲ್ಲಿ ಮೇ 8ರಂದು ಸಂಜೆ 7.30 ಕ್ಕೆ ನಡೆಯಲಿದೆ.

‘ಹಾಡಿನ ಚಿತ್ರೀಕರಣವನ್ನು ಮೆದೇಹಳ್ಳಿ ರಸ್ತೆ, ತರಕಾರಿ ಮಾರುಕಟ್ಟೆ, ಬಸವೇಶ್ವರ ರಸ್ತೆ ಸೇರಿದಂತೆ ಹಲವೆಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಮೇ 12ಕ್ಕೆ ಮತದಾನ ನಡೆಯಲಿದ್ದು, ಇದೇ ವಿಷಯವಾಗಿ ಜಾಗೃತಿ ಮೂಡಿಸಲು ಸ್ನೇಹಿತರೆಲ್ಲ ಸೇರಿ ರ‍್ಯಾಪ್ ಸಾಂಗ್ ಮಾಡಿದ್ದೇವೆ’ ಎನ್ನುತ್ತಾರೆ ವಿಷ್ಣು ಶರ್ಮಾ.

ಈ ಕಿರುಚಿತ್ರದ ಸಿ.ಡಿ ಬಿಡುಗಡೆ ಸಮಾರಂಭವೂ ಇಲ್ಲಿನ ರೋಟರಿ ಕ್ಲಬ್‌ನಲ್ಲಿ ಮೇ 8ರಂದು ಸಂಜೆ 7.30 ಕ್ಕೆ ನಡೆಯಲಿದೆ.

ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಸಹನಾ ಮಾತೃಶ್ರೀ ಸಂಸ್ಥೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ರೋಟರಿ ಕ್ಲಬ್‌ನ ಡಿ.ಜಿ. ಮಧುಪ್ರಸಾದ್ ಉದ್ಘಾಟಿಸುವರು.

ರೋಟರಿ ಕ್ಲಬ್‌ನ ಅಧ್ಯಕ್ಷ ಅರುಣ್‌ಕುಮಾರ್ ಅಧ್ಯಕ್ಷತೆ ವಹಿಸುವರು. ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ದಯಾಪುತ್ತೂರ್‌ಕರ್, ಸಹನಾ ಮಾತೃಶ್ರೀ ಸಂಸ್ಥೆಯ ಅಧ್ಯಕ್ಷೆ ರೀನಾ ವೀರಭದ್ರಪ್ಪ ಅತಿಥಿಗಳಾಗಿ ಭಾಗವಹಿಸುವರು.

ಬೋರೇಶ ಎಂ.ಜೆ. ಬಚ್ಚಬೋರನಹಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.