ಗುರುವಾರ , ಡಿಸೆಂಬರ್ 5, 2019
20 °C

ಒಂದೇ ಕುಟುಂಬದ ಮೂವರಿಗೆ ಪಂಗನಾಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಒಂದೇ ಕುಟುಂಬದ ಮೂವರನ್ನು ಆರೋಪಿಯೊಬ್ಬ ವಂಚಿಸಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ.

ಎಟಿಎಂನಿಂದ ₹ 52 ಸಾವಿರ ಮೊತ್ತ ಡ್ರಾ ಮಾಡಿರುವ ಕುರಿತು ಶಿವಮೊಗ್ಗದ ಸೈಬರ್ ಕ್ರೈಂ ಮತ್ತು ಆರ್ಥಿಕ, ಮಾದಕ ವಸ್ತು ಅಪರಾಧ ತಡೆ ವಿಭಾಗದಲ್ಲಿ ದೂರು ದಾಖಲಾಗಿದೆ.

ಭದ್ರಾವತಿಯ ಪ್ರಭಾಕರ್ ಮೋಸ ಹೋದವರು. ‍ಪ್ರಭಾಕರ್ ಅವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಎಟಿಎಂ ಕಾರ್ಡ್‌ ನವೀಕರಣ ಮಾಡಬೇಕಾಗಿದೆ ಎಂದು ತಿಳಿಸಿ, ಪ್ರಭಾಕರ್, ಪತ್ನಿ ಹಾಗೂ ಪುತ್ರಿಯ ಎಟಿಎಂ ಕಾರ್ಡ್‌ ನಂಬರ್ ಮತ್ತು ಒಟಿ‍ಪಿ ನಂಬರ್‌ ಪಡೆದುಕೊಂಡು ಆನ್‌ಲೈನ್‌ ಮೂಲಕ ಮೂರು ಜನರ ಖಾತೆಯಿಂದ ಹಣ ಡ್ರಾ ಮಾಡಿದ್ದಾನೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು