ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಿಯಡ್ಕ | ತುಂತುರು ಮಳೆ

Published 3 ಜನವರಿ 2024, 13:57 IST
Last Updated 3 ಜನವರಿ 2024, 13:57 IST
ಅಕ್ಷರ ಗಾತ್ರ

ಬದಿಯಡ್ಕ: ಮುಳ್ಳೇರಿಯ, ಅಡೂರು, ಕುಂಟಾರು ಪರಿಸರದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ತುಂತುರು ಮಳೆ ಆರಂಭವಾಗಿದ್ದು,  ದಿಢೀರ್ ಮಳೆಯಿಂದ ಕೃಷಿಕರು ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಒದ್ದೆಯಾಗಿದೆ. ಈಗ ಸುರಿದಿರುವ ಮಳೆಯಿಂದ  ಹೊಸದಾಗಿ ಚಿಗುರಿದ ಅಡಿಕೆ ಹಿಂಗಾರಕ್ಕೆ ತೊಂದರೆ ಆಗಬಹುದು ಎಂಬುದು ಕೃಷಿಕರ ಅಭಿಮತ. ಕಾಳುಮೆಣಸು ಕಟಾವಿಗೆ ಸಿದ್ಧವಾಗಿದ್ದು, ಅಕಾಲಿಕ ಮಳೆಯ ಕೃಷಿಕರಲ್ಲಿ ಆತಂಕ ಸೃಷ್ಟಿಸಿದೆ. ಈ ವರ್ಷ ಅಡಿಕೆ ಇಳುವರಿ ಬಹಳ ಕಡಿಮೆ ಇದ್ದು, ಕೊಯ್ಲು ಮಾಡಿರುವ ಅಡಿಕೆ ಮಳೆಯಿಂದ ಒದ್ದೆಯಾಗಿರುವುದು ಮತ್ತು ಮಳೆ ಮುಂದುವರಿದರೆ ಒಣಗಲು ಹಾಕಿರುವ ಅಡಿಕೆಯನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಬೆಳೆಗಾರರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT