ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಬಂದಿದ್ದ 1.35 ಲಕ್ಷ ಮಂದಿ ಉಪಾಹಾರ ಸೇವನೆ

ಕಪ್ಪು ಅಂಗಿ, ಲುಂಗಿ ಧರಿಸಿದವರಿಗೆ ಪ್ರವೇಶ ನಿರಾಕರಣೆ
Last Updated 3 ಸೆಪ್ಟೆಂಬರ್ 2022, 4:25 IST
ಅಕ್ಷರ ಗಾತ್ರ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಬಂದಿದ್ದ ಜನರ ಹಸಿವು ತಣಿಸಲು ಉಪಾಹಾರದ ವ್ಯವಸ್ಥೆಯನ್ನು ಪ್ರವೇಶದ್ವಾರದ ಸಮೀಪದಲ್ಲೇ ಕಲ್ಪಿಸಲಾಗಿತ್ತು. ಸುಮಾರು 1.35 ಲಕ್ಷ ಮಂದಿ ಆಹಾರವನ್ನು ಸೇವಿಸಿದರು.

ಮಂಗಳೂರಿನ ರಥಬೀದಿಯ ಕಾಮತ್‌ ಕ್ಯಾಟರರ್ಸ್ ಈ ವ್ಯವಸ್ಥೆಯ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಆರಂಭದಲ್ಲಿ 25 ಸಾವಿರ ಮಂದಿಗೆ ಆಹಾರ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅವರಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಹಂತಹಂತವಾಗಿ 50 ಸಾವಿರ, 75 ಸಾವಿರ, ಅಂತಿಮವಾಗಿ 1 ಲಕ್ಷ ಉಪಾಹಾರದ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಊಟದ ವ್ಯವಸ್ಥೆಗಾಗಿ ನಿರ್ಮಿಸಿದ್ದ ಬೃಹತ್‌ ಪೆಂಡಾಲ್‌ನಲ್ಲಿ 25ಕ್ಕೂ ಅಧಿಕ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಬಾಸ್ಮತಿ ಅಕ್ಕಿ ಮತ್ತು ತುಪ್ಪದಲ್ಲಿ ತಯಾರಿಸಿದ ಬಿಸಿ ಬಿಸಿ ಪಲಾವ್‌ ಮತ್ತು ಸಲಾಡ್‌ವ್ಯವಸ್ಥೆಮಾಡಲಾಗಿತ್ತು. ಬೆಳಿಗ್ಗೆ 10ರಿಂದ ಆರಂಭವಾಗಿ ಸಂಜೆ 4 ಗಂಟೆ ತನಕ ನಿರಂತರವಾಗಿ ಆಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಸ್‌ನಲ್ಲಿ ಬಂದಿದ್ದ ಹಲವರಿಗೆ ಆಹಾರ ಪೊಟ್ಟಣ, ನೀರನ್ನು ಅಲ್ಲಿಗೆ ಸರಬರಾಜು ಮಾಡಲಾಯಿತು.

‘ಉಘು ಉಪಾಹಾರದ ಗುತ್ತಿಗೆಯನ್ನು ನಮ್ಮ ಕಾಮತ್‌ ಕ್ಯಾಟರರ್ಸ್‌ಗೆ ನೀಡಲಾಗಿತ್ತಾದರೂ ಜನರಿಗೆ ಬಿಸಿಬಿಸಿಯಾಗಿ ಆಹಾರ ಪೂರೈಸುವ ಉದ್ದೇಶದಿಂದ ಈ ಜವಾಬ್ದಾರಿಯನ್ನು ಜಿಲ್ಲಾ ಕ್ಯಾಟರರ್ಸ್‌ ಸಂಘದ ಮೂಲಕ ಹಂಚಿಕೊಂಡಿದ್ದೆವು. ಸಂಘದ 18 ಸದಸ್ಯರು ಸೇರಿ ಆಹಾರವನ್ನು ತಯಾರಿಸಿ, ಪೂರೈಸಿದ್ದೇವೆ. ಬೆಳಿಗ್ಗೆ 1 ಲಕ್ಷ ತಟ್ಟೆಗಳನ್ನು ತಂದಿದ್ದೆವು. ಜನಸಂದಣಿ ನೋಡಿ ಮತ್ತೆ ಆಹಾರ ತಯಾರಿಸಿ 40 ಸಾವಿರ ಹೆಚ್ಚುವರಿ ತಟ್ಟೆಗಳನ್ನು ತಂದೆವು’ ಎಂದು ಕಾಮತ್‌ ಕ್ಯಾಟರರ್ಸ್‌ನ ಸುಧಾಕರ ಕಾಮತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT