ಉಳ್ಳಾಲ: ಇಲ್ಲಿನ ನಗರಸಭೆಯ ಕೆರೆಬೈಲ್ ವಾರ್ಡ್ಗೆ ₹ 1.59 ಕೋಟಿ ಅನುದಾನ ಮೀಸಲಿಡಲಾಗಿದ್ದು, ಮಳೆಹಾನಿಯಿಂದ ಉಂಟಾದ ತಡೆಗೋಡೆ ದುರಸ್ತಿ, ಪುರಾತನ ಕೆರೆಯ ಅಭಿವೃದ್ಧಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ತೊಕ್ಕೊಟ್ಟು ಕೆರೆಬೈಲ್ ಪ್ರದೇಶಕ್ಕೆ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಕೆರೆಬೈಲ್ ವಾರ್ಡ್ನ ರಸ್ತೆ ಹಾಗೂ ತಡೆಗೋಡೆ ಕಾಮಗಾರಿಗೆ ₹ 85 ಲಕ್ಷ ಅನುದಾನ ಮೀಸಲಿಡಲಾಗಿದೆ. ಪುರಾತನ ಕೆರೆ ದುರಸ್ತಿಗೊಳಿಸಲು ₹ 74 ಲಕ್ಷ ಮೀಸಲಿಡಲಾಗಿದೆ. ಕಳೆದ ಮಳೆಗಾಲದಲ್ಲಿ ತಡೆಗೋಡೆ ಕುಸಿದು ಹಾನಿಗೀಡಾದ ಪ್ರದೇಶಕ್ಕೆ ಹೆಚ್ಚುವರಿ ಅನುದಾನ ಬೇಕಾದರೆ ಮೀಸಲಿಡಲಾಗುವುದು. ಕ್ಷೇತ್ರದ ಜನಸಾಮಾನ್ಯರ ಅಭಿವೃದ್ಧಿಯ ಅನುದಾನಗಳಿಗೆ ಕೊರತೆಯಿಲ್ಲ. ಅನುದಾನ ತರಿಸುವ ಸಾಮರ್ಥ್ಯ ಇದೆ. ಖಾಸಗಿಯವರ ಗುಡ್ಡ ಕುಸಿದಾದ ಸರ್ಕಾರದ ಅನುದಾನ ಉಪಯೋಗಿಸುವುದು ಸೂಕ್ತವಲ್ಲ. ಆದರೆ, ಅನಿವಾರ್ಯವಾಗಿ ಕಾಮಗಾರಿಗಳನ್ನು ನಡೆಸಬೇಕಾಗಿದೆ. ನೀತಿ ಜಾರಿಗೊಳಿಸಿದ ನಂತರವಷ್ಟೇ ಖಾಸಗಿಯವರಿಗೆ ಅಥವಾ ಮನೆ ಕಟ್ಟಲು ಅನುಮತಿ ನೀಡುವ ಅಧಿಕಾರಿಗಳ ಮೇಲೆ ಕ್ರಮ ವಹಿಸಲು ಸಾಧ್ಯ ಎಂದರು.

ಉಳ್ಳಾಲ ನಗರಸಭೆ ಅಧ್ಯಕ್ಷೆ ಶಶಿಕಲಾ, ಉಳ್ಳಾಲ ಪುರಸಭೆ ಮಾಜಿ ಉಪಾಧ್ಯಕ್ಷ ದಿನೇಶ್ ರೈ, ಪ್ರಕಾಶ್ ಪಿಂಟೊ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಫ್ವಾನ್ ಕೆರೆಬೈಲ್, ಕೊರಗತನಿಯ ಸೇವಾ ಸಮಿತಿ ಕಾರ್ಯದರ್ಶಿ ವಿಕ್ರಮ್ ಪೂಜಾರಿ, ವಿಶಾಲ್ ಕೊಲ್ಯ, ಸುಗಂಧಿ, ವಸಂತಿ, ಸುರೇಶ್ ಟೈಲರ್, ಮನ್ಸೂರ್, ಝಿಯಾದ್, ಅಶ್ರಫ್, ನಾಸೀರ್, ಸಿಮಾಕ್, ರಾಕೇಶ್ ಪೂಜಾರಿ, ಮುತ್ತಲಿಬ್, ಐಫತ್, ರಿಫಾಜ್, ಐರಿನ್, ಉರ್ಬನ್, ಅನಿತಾ, ಜೂಲಿಯೆಟ್, ಸಂತೋಷ್ ಕೆರೆಬೈಲ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.