ಗುರುವಾರ , ಮೇ 13, 2021
16 °C

ಕಾಸರಗೋಡು: 643 ಮಂದಿಗೆ ಕೋವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಿಲ್ಲೆಯಲ್ಲಿ ಶುಕ್ರವಾರ 643 ಮಂದಿಗೆ ಕೋವಿಡ್‌ –19ದೃಢಪಟ್ಟಿದ್ದು, 537 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 3,641 ಸಕ್ರಿಯ ಪ್ರಕರಣಗಳಿದ್ದು, 9,088 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ 36,417 ಮಂದಿಗೆ ಸೋಂಕು ದೃಢಪಟ್ಟಿದ್ದು, 32,631 ಮಂದಿ ಗುಣಮುಖರಾಗಿದ್ದಾರೆ.

ವಿವಾಹ ಸಮಾರಂಭಕ್ಕೆ ಅನುಮತಿ ಕಡ್ಡಾಯ: ವಿವಾಹ ಸೇರಿದಂತೆ ಇನ್ನಿತರ ಸಮಾರಂಭಗಳಿಗೆ ಸ್ಥಳೀಯಾಡಳಿತ ಸಂಸ್ಥೆಗಳಿಂದ ಪೂರ್ವಾನುಮತಿ ಪಡೆಯಬೇಕು. ಕೋವಿಡ್ ಮಾನದಂಡ ಪಾಲಿಸಿ ಗರಿಷ್ಠ 100 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ಸ್ಥಳೀಯಾಡಳಿತ ಮಟ್ಟದಲ್ಲಿ ಜನಜಾಗೃತಿ ಸಮಿತಿಗಳನ್ನು ಚುರುಕುಗೊಳಿಸಲಾಗುವುದು ಎಂದು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ತಿಳಿಸಿದ್ದಾರೆ.

ಈಗ ನಿಗದಿಪಡಿಸಿದ ಸಮಾರಂಭ ಹೊರತು ಪಡಿಸಿ, ಯಾವುದೇ ಹೊಸ ಕಾರ್ಯಕ್ರಮ ಆಯೋಜಿಸಬಾರದು. ಅನುಮತಿ ಪಡೆದಿರುವ ಉತ್ಸವಗಳನ್ನು ಹಾಗೂ ಅನಿವಾರ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ನಡೆಸ ಬೇಕು. ಆರಾಧನಾಲಯಗಳಲ್ಲಿ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯ ಬೀಚ್ ಹಾಗೂ ಪ್ರವಾಸಿ ತಾಣಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಕೋವಿಡ್ ಮಾನದಂಡ ಗಳನ್ನು ಪಾಲಿಸದವರ ವಿರುದ್ದ ನಿಗಾ ವಹಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಠಿಣ ನಿರ್ಬಂಧ: ‘ಅಂಗಡಿಗಳು ರಾತ್ರಿ 10 ಗಂಟೆ ಬಳಿಕ ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ. ಆದೇಶ ಉಲ್ಲಂಘಿಸಿದಲ್ಲಿ ಪರವಾನಗಿ ರದ್ದು ಸೇರಿದಂತೆ ಕ್ರಮ ತೆಗೆದುಕೊಳ್ಳ ಲಾಗುವುದು. ಸಭಾಂಗಣಗಳಲ್ಲಿ 75 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿವಾಹ ಮೊದಲಾದ ಸಮಾರಂಭಗಳಿಗೆ 100 ಮಂದಿ ಪಾಲ್ಗೊಳ್ಳಬಹುದಾಗಿದೆ. ಆರಾಧನಾಲಯಗಳಲ್ಲಿ ಮಾನದಂಡ ಪಾಲಿಸಿ ಪ್ರಾರ್ಥನೆ ನಡೆಸಬಹುದಾಗಿದೆ. 100ಕ್ಕಿಂತ ಹೆಚ್ಚಿನ ಮಂದಿ ಪಾಲ್ಗೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ. ರಾಜೀವ್ ತಿಳಿಸಿದ್ದಾರೆ.

ಕೋವಿಡ್: ದ.ಕ.ದಲ್ಲಿ ದ್ವಿಶತಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚಾಗಿದ್ದು, ಒಟ್ಟು 256 ಮಂದಿಗೆ ಕೋವಿಡ್ ದೃಢವಾಗಿದೆ. ಈ ಮಧ್ಯೆ 92 ಜನರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 6.80 ಲಕ್ಷ ಜನರ ಗಂಟಲು ದ್ರವ ತಪಾಸಣೆ ನಡೆಸಿದ್ದು, 6.42 ಲಕ್ಷ ಜನರ ವರದಿ ನೆಗೆಟಿವ್ ಬಂದಿದೆ. ಇದುವರೆಗೆ ಒಟ್ಟು 37,562 ಜನರಿಗೆ ಕೋವಿಡ್–19 ದೃಢವಾಗಿದ್ದು, 35,405 ಜನರು ಗುಣಮುಖರಾಗಿದ್ದಾರೆ. ಸದ್ಯ 1,414 ಸಕ್ರಿಯ ಪ್ರಕರಣಗಳಿವೆ.

ದಂಡ: ಜಿಲ್ಲೆಯಲ್ಲಿ ಈವರೆಗೆ ಮಾಸ್ಕ್‌ ನಿಯಮ ಉಲ್ಲಂಘನೆಯ 45,925 ಪ್ರಕರಣ ಪತ್ತೆ ಮಾಡಲಾಗಿದ್ದು, ₹47.69 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.