ಬಂಟ್ವಾಳ: ಕೋವಿಡ್ ಲಾಕ್‌ಡೌನ್ ವೇಳೆ ವಿಮಾನಯಾನ ರದ್ದುಗೊಂಡು ಭಾರತದಲ್ಲಿ ಉಳಿದುಕೊಂಡಿದ್ದ 73 ಮಂದಿ ಭಾರತೀಯ ಆರೋಗ್ಯ ಕಾರ್ಯಕರ್ತರನ್ನು ದುಬೈ ಆರೋಗ್ಯ ಪ್ರಾಧಿಕಾರ (ಡಿ.ಎಚ್.ಎ.)ದಿಂದ ವಿಶೇಷ ಅನುಮತಿ ಪಡೆದು ಮರಳಿ ಕರೆಸಿಕೊಳ್ಳಲಾಗಿದೆ ಎಂದು ಆಸ್ಟರ್ ಡಿ.ಎಂ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಬಶೀರ್ ಬಂಟ್ವಾಳ ತಿಳಿಸಿದ್ದಾರೆ.
ಕೋವಿಡ್ ಕಾರಣಕ್ಕೆ ಏಪ್ರಿಲ್ 25ರಂದು ಭಾರತ - ಯು.ಎ.ಇ. ನಡುವಿನ ವಿಮಾನಯಾನ ರದ್ದುಗೊಂಡಿತ್ತು. ಇದರಿಂದಾಗಿ ಆಸ್ಟರ್ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳ ಸಿಬ್ಬಂದಿ ಯು.ಎ.ಇ.ಗೆ ತೆರಳಲು ಸಾಧ್ಯವಾಗದೆ ಭಾರತದಲ್ಲಿ ಉಳಿದುಕೊಂಡಿದ್ದರು. ಈಗ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ವೈದ್ಯರು, ದಾದಿಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 73 ಮಂದಿಯ ಮೊದಲ ತಂಡದವರು
ಬುಧವಾರ ಬೆಳಿಗ್ಗೆ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ವಿಶೇಷ ಎಮಿರೇಟ್ಸ್ ವಿಮಾನಗಳಲ್ಲಿ ಬಂದಿದ್ದಾರೆ. ಉಳಿದವರನ್ನು ಸಹ ಶೀಘ್ರ ಕರೆತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.